ಹೆಚ್ಚಾಯ್ತು ಗರ್ಭಪಾತ ದಂಧೆ: ಬಾಗಲಕೋಟೆಯ ಪ್ರತಿಷ್ಟಿತ ಆಸ್ಪತ್ರೆಗಳ ಮೇಲೆ ದಾಳಿ!

0
Spread the love

ಬಾಗಲಕೋಟೆ:- ಜಿಲ್ಲೆಯ ಮುಧೋಳ ಹಾಗೂ ಬಾದಾಮಿ ಪಟ್ಟಣದಲ್ಲಿ ಪ್ರತಿಷ್ಟಿತ ಆಸ್ಪತ್ರೆಗಳ ಆಸ್ಪತ್ರೆಗಳ ಮೇಲೆ ದೆಹಲಿಯ ಕೇಂದ್ರ ಪ್ರಸವಪೂರ್ವ ಭ್ರೂಣ ಪತ್ತೆ ನಿಷೇಧ ತಂಡ ದಾಳಿ ಮಾಡಿದ ಘಟನೆ ಜರುಗಿದೆ.

Advertisement

ದೆಹಲಿ ತಂಡಕ್ಕೆ ಖಚಿತ‌ ಮಾಹಿತಿ ಬಂದ ಹಿನ್ನೆಲೆ, ನಗರದ ಮಲಘಾಣ್ ಆಸ್ಪತ್ರೆ ಮೇಲೆ ದಾಳಿ ಮಾಡಲಾಗಿದ್ದು, ಡಾ.ಆಶಾ ಮಲಘಾಣ್ ಎಂಬುವವರು ಸ್ಕ್ಯಾನಿಂಗ್ ಸೆಂಟರ್ ಬಳಕೆ‌ ಮಾಡುತ್ತಿದ್ದಾರೆ. ಅದರ ಮೂಲಕ ಬ್ರೂಣ ಸ್ಕ್ಯಾನಿಂಗ್, ನಂತರ ಗರ್ಭಪಾತ ಮಾಡುತ್ತಾರೆ ಎಂದು ದೆಹಲಿ ತಂಡಕ್ಕೆ ಖಚಿತ‌ ಮಾಹಿತಿ ಬಂದಿದೆ. ಇದರಿಂದ ಆಸ್ಪತ್ರೆ ಮೇಲೆ ದಾಳಿ ಮಾಡಿ ಸ್ಕ್ಯಾನಿಂಗ್ ಸೆಂಟರ್ ಸೀಜ್ ಮಾಡಿ, ಪ್ರಮುಖ ಮಾಹಿತಿ ಕಲೆ‌ ಹಾಕಿದೆ

ಇದರ ಜೊತೆಗೆ ಬಾದಾಮಿ ಪಟ್ಟಣದಲ್ಲಿ ರೇಣುಕಾ ಆಸ್ಪತ್ರೆ ಮೇಲೆ ದಾಳಿ‌ ಮಾಡಲಾಗಿದೆ. ಇಲ್ಲಿ ಕವಿತಾ ಶಿವನಾಯ್ಕರ್ ಬಾದಾಮಿ ಸರಕಾರಿ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ತಜ್ಞೆಯಾಗಿದ್ದಾರೆ. ಇದರ ಜೊತೆಗೆ ರೇಣುಕಾ ಖಾಸಗಿ ಆಸ್ಪತ್ರೆ ನಡೆಸುತ್ತಿದ್ದು, ಅಲ್ಲಿಯೂ ಸ್ಕ್ಯಾನಿಂಗ್ ಮಷಿನ್ ಹಾಗೂ ಕೊಠಡಿ ಸೀಜ್ ಮಾಡಲಾಗಿದೆ. ಆಸ್ಪತ್ರೆಯಲ್ಲಿ ಬ್ರೂಣ ಸ್ಕ್ಯಾನ್ ‌ಮಾಡಿ ಗರ್ಭಪಾತ ದಂಧೆ ಮಾಡಿರೋದು ಮೇಲ್ನೋಟಕ್ಕೆ ಖಚಿತವಾಗಿದೆಯಂತೆ.

ಜೊತೆಗೆ ಗುಳೇದಗುಡ್ಡ ಪಟ್ಟಣದ ಬನಶಂಕರಿ ಆಸ್ಪತ್ರೆ ಮೇಲೂ ದಾಳಿ ನಡೆಸಲಾಗಿದೆ. ಬಾದಾಮಿ, ಗುಳೇದಗುಡ್ಡ ಹಾಗೂ ಮುಧೋಳ ಮೂರು ಆಸ್ಪತ್ರೆ ಮೇಲಿನ ಕೆಪಿಎಮ್​ಇ ಆ್ಯಕ್ಟ್ ಪರವಾನಿಗೆ ಪರಿಶೀಲನೆ ‌ನಡೆಸುತ್ತೇವೆ. ದಾಳಿಗೊಳಗಾದ ಆಸ್ಪತ್ರೆಗೆ ಸಂಬಂಧಿಸಿದಂತೆ ದೂರು ನೀಡಲು ಡಿಹೆಚ್​ಓ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.


Spread the love

LEAVE A REPLY

Please enter your comment!
Please enter your name here