ಕಲಬುರಗಿ:- ಜಿಟಿ ಜಿಟಿ ಮಳೆಯಲ್ಲೂ ಕಾರೊಂದು ಹೊತ್ತಿ ಉರಿದ ಘಟನೆ ಕಲಬುರಗಿ ನಗರದ ಚಂದ್ರಶೇಖರ ಪಾಟೀಲ್ ಸ್ಟೇಡಿಯಂ ಬಳಿ ಜರುಗಿದೆ.
ಕಳೆದ ಕೆಲವು ದಿನಗಳಿಂದ ಮಳೆಯ ಅಬ್ಬರ ಜೋರಾಗಿದ್ದು, ಬಿಸಿಲೇ ಇಲ್ಲದಂತಾಗಿದೆ. ಇಂತಹ ಸಮಯದಲ್ಲೇ ಇಲ್ಲೊಂದು ಕಾರು ಮಳೆಯಲ್ಲೂ ಹೊತ್ತಿ ಉರಿದಿದೆ. ರಸ್ತೆ ಬದಿ ನಿಂತಿದ್ದ ಮಾರುತಿ 800 ಕಾರ್ ಬೆಂಕಿಗೆ ಆಹುತಿ ಆಗಿದೆ ಎಂದು ಹೇಳಲಾಗಿದೆ.
ಕೂಡಲೇ ಸ್ಥಳೀಯರ ಮಾಹಿತಿ ಆಧರಿಸಿ ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂಧಿಗಳು ಭೇಟಿ ನೀಡಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ.
ಸ್ಟೇಷನ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಜರುಗಿದೆ.



