ಸಂಗೀತ ಕಲಿಯುವ ವಿದ್ಯಾರ್ಥಿಗಳ ಪರೀಕ್ಷಾ ಕೇಂದ್ರ ಹುಬ್ಬಳ್ಳಿಗೆ ಶಿಫ್ಟ್: ಹೋರಾಟಕ್ಕಿಳಿದ ಶ್ರೀಗಳು!

0
Spread the love

ಗದಗ:- ಸಂಗೀತ ಕಲಿಯುವ ವಿದ್ಯಾರ್ಥಿಗಳ ಪರೀಕ್ಷಾ ಕೇಂದ್ರ ಹುಬ್ಬಳ್ಳಿಗೆ ಶಿಫ್ಟ್ ಆದ ಹಿನ್ನೆಲೆ ರಾಜ್ಯ ಸರ್ಕಾರದ ವಿರುದ್ಧ ಗದಗನಲ್ಲಿ ಆಕ್ರೋಶ ವ್ಯಕ್ತವಾಗಿದೆ.

Advertisement

ಅಂಧ, ಅನಾಥ, ವಿಕಲಚೇತನ ವಿದ್ಯಾರ್ಥಿಗಳಿಗಾಗಿ ಗದಗನ ಶ್ರೀ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಪೂಜ್ಯ ಶ್ರೀ ಕಲ್ಲಯ್ಯಜ್ಜನವರು ಸ್ವತಃ ಬೀದಿಗಿಳಿದು ಗುರುವಾರ ಹೋರಾಟ ನಡೆಸಿದರು.

ನಗರದ ಶ್ರೀ ವೀರೇಶ್ವರ ಪುಣ್ಯಾಶ್ರಮ ಅಂಧ ಅನಾಥ ಮಕ್ಕಳಿಗೆ ದಾರಿ ದೀಪವಾಗಿದೆ. ಅದರಲ್ಲೂ ಗದಗ ಜಿಲ್ಲೆ ಅಂದ್ರೆ ಇದು ಸಂಗೀತ ಕಾಶಿ ಎಂದು ಜನಪ್ರಿಯ. ಇಲ್ಲಿ ಸಂಗೀತ ಕಲಿತು ಹೋದವರು ನಾಡಿನಲ್ಲಿ ಬಹುದೊಡ್ಡ ಹೆಸರು ಮಾಡಿದ್ದಾರೆ. ಲಿಂಗೈಕ್ಯ ಪಂಡಿತ ಪುಟ್ಟರಾಜ ಗವಾಯಿಗಳು ಅಂಧ, ಅನಾಥರ ಬಾಳಲ್ಲಿ ಸಂಗೀತದ ದೀಪ ಹಚ್ಚುವ ಮೂಲಕ ಸಂಗೀತದ ಬದುಕು ನೀಡಿದ್ದಾರೆ. ಇಷ್ಟೊಂದು ಸಂಗೀತದ ಹಿನ್ನೆಲೆ ಇರುವ ನಗರ ಗದಗ ಜಿಲ್ಲೆ.

ಆದರೆ ಇಷ್ಟು ವರ್ಷಗಳ ಕಾಲ ಸಂಗೀತ ಪರೀಕ್ಷಾ ಕೇಂದ್ರವನ್ನು ಗದಗ ನಗರದಲ್ಲಿ ನಡೆಸುತ್ತಿದ್ದರು. ಆದರೆ ಈ ಬಾರಿ ಏಕಾಏಕಿ ಗದಗ ನಗರದ ಸಂಗೀತ ಪರೀಕ್ಷಾ ಕೇಂದ್ರವನ್ನು ಹುಬ್ಬಳ್ಳಿ ಶಿಫ್ಟ್ ಮಾಡಲಾಗಿದೆ.

ಇದು ಸಂಗೀತ ವಿದ್ಯಾರ್ಥಿಗಳು ಹಾಗೂ ಶ್ರೀ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗಳಾದ ಶ್ರೀ ಕಲ್ಲಯ್ಯಜ್ಜನವರ ಆಕ್ರೋಶಕ್ಕೆ ಕಾರಣವಾಗಿದೆ.

ಗುರುವಾರ ಶ್ರೀಮಠದಿಂದ ಡಿಸಿ ಕಚೇರಿವರೆಗೂ ಅಂಧ, ಅನಾಥ ಮಕ್ಕಳ ಜೊತೆ ಶ್ರೀಗಳು ಬೀದಿಗಿಳಿದು ಹೋರಾಟ ಮಾಡಿದ್ದಾರೆ. ಕುಲಪತಿಗೆ ಸಂಗೀತದ ಗಂಧವೇ ಇಲ್ಲ ಅಂತ ಕಿಡಿಕಾರಿದ್ದಾರೆ.

ಶತಮಾನದ ಇತಿಹಾಸಕ್ಕೆ ಧಕ್ಕೆ ಆದರೆ ಪ್ರಾಣ ತ್ಯಾಗಕ್ಕೂ ಸಿದ್ಧ ಎಂದು ಎಚ್ಚರಿಕೆ ನೀಡಿದ ಶ್ರೀಗಳು ಸರ್ಕಾರಕ್ಕೆ ಗಂಭೀರ ಎಚ್ಚರಿಕೆ ನೀಡಿದ್ದಾರೆ. ಕೇಂದ್ರ ರದ್ದು ಮಾಡಿದರೆ ಎಲ್ಲ ವಿದ್ಯಾರ್ಥಿಗಳು ಭಹಿಷ್ಕಾರ ಮಾಡ್ತಾರೆ. ಬೇರೆ ಕಡೇ ಸಂಗೀತ ಪರೀಕ್ಷೆ ಬರೆಯಲು ಅಂಧ ಮಕ್ಕಳು ಹೇಗೆ ಹೋಗಬೇಕು ಎಂದು ಆಕ್ರೋಶ ವ್ಯಕ್ತಪಡೆಸಿದ್ದಾರೆ.


Spread the love

LEAVE A REPLY

Please enter your comment!
Please enter your name here