ಕೊಪ್ಪಳ:– ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಬಳಿಯಿರುವ ಜಲಾಶಯ ವಿದ್ಯುತ್ ದೀಪಗಳಿಂದ ಜಗಮಗಿಸಿದೆ. ಇನ್ನು ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವ ಹಿನ್ನೆಲೆ ಡ್ಯಾಂ ನ ಮೂವತ್ಮೂರು ಕ್ರಸ್ಟ್ ಗೇಟ್ಗಳ ಮೂಲಕ ನದಿಗೆ ನೀರು ಬಿಡಲಾಗಿದೆ.
Advertisement
ರಾತ್ರಿ ಸಮಯದಲ್ಲಿ ಗೇಟ್ಗಳಿಗೆ ವಿದ್ಯುತ್ ದೀಪಗಳು ಅಳವಡಿಸಲಾಗಿದ್ದು, ದುಮ್ಮಕ್ಕು ನೀರಿನಲ್ಲಿ ಕಲರಪುಲ್ ಲೈಟಿಂಗ್ ನೋಡುಗರ ಕಣ್ಮನ ಸೆಳೆಯುತ್ತಿದೆ.
ಇನ್ನೂ ತುಂಗಭದ್ರಾ ಜಲಾಶಯ ಭರ್ತಿ ಆಗುವ ಹಂತಕ್ಕೆ ಬಂದ ಹಿನ್ನೆಲೆ ಅಧಿಕಾರಿಗಳು ಜುಲೈ ತಿಂಗಳಲ್ಲಿಯೇ ನದಿಗೆ ನೀರು ಬಿಟ್ಟಿದ್ದಾರೆ.