ಬೆಂಗಳೂರು: ಕಳ್ಳತನವನ್ನೇ ಉದ್ಯೋಗ ಮಾಡಿಕೊಂಡಿದ್ದ ಕಳ್ಳನನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ. ಯಾಸೀನ್ ಖಾನ್ @ ಚೋರ್ ಇಮ್ರಾನ್ ಬಂಧಿತ ಆರೋಪಿಯಾಗಿದ್ದು, ಹಗಲು, ರಾತ್ರಿ ಎನ್ನದೇ ಕಂಡ- ಕಂಡ ಮನೆಗೆ ಕನ್ನ ಹಾಕುವುದೇ ಇವನ ಕೆಲಸವಾಗಿದೆ. 80 ಕ್ಕೂ ಹೆಚ್ಚು ಪ್ರಕರಣಗಳು ಆರೋಪಿಯ ಮೇಲಿವೆ.
Advertisement
ಜೈಲಿಗೆ ಹೋಗಿ ಬಂದ್ರೂ ಕಳ್ಳತನ ಮಾಡೋದನ್ನು ಮುಂದುವರೆಸಿದ್ದನು. ಅಂತೆಯೇ ಜನವರಿ ತಿಂಗಳಲ್ಲಿ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಕಳ್ಳತನ ಮಾಡಿದ್ದನು. ಆರೋಪಿಯಿಂದ 1 ಕೆಜಿ 386 ಗ್ರಾಂ ಬಂಗಾರ, ಒಂದೂವರೆ ಕೆಜಿ ಬೆಳ್ಳಿ, ನಗದು ಸೀಜ್ ಮಾಡಲಾಗಿದ್ದು, 12 ಪೊಲೀಸ್ ಠಾಣೆಯ 26 ಕಳ್ಳತನ ಪ್ರಕರಣಗಳು ಪತ್ತೆಯಾಗಿದೆ. ಇನ್ನೂ ಈ ಘಟನೆ ಸಂಬಂಧ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.