ಗದಗ: ರಾಜ್ಯದಲ್ಲಿ ವರುಣ ಮತ್ತೆ ಆರ್ಭಟಿಸುತ್ತಿದ್ದಾನೆ. ರಾಜ್ಯದ ಅನೇಕ ಕಡೆ ಪ್ರತಿ ದಿನ ಮಳೆಯಾಗುತ್ತಿದ್ದು ಅನೇಕ ಅವಾಂತರಗಳು ಸಹ ಸಂಭವಿಸಿವೆ. ಅದೇ ರೀತಿ ನಿರಂತರ ಮಳೆ ಹಿನ್ನೆಲೆ ಗದಗನಲ್ಲಿ ಭೂಕುಸಿತ ಉಂಟಾಗಿದೆ. ಗದಗ ನಗರದ ನರಿಭಾವಿ ಓಣಿಯ ವಾಸವಿ ಸ್ಕೂಲ್ ಬಳಿ ಈ ಘಟನೆ ನಡೆದಿದ್ದು, ಭೂಕುಸಿತ ದಿಂದ ಸ್ಥಳೀಯರು ಆತಂಕಗೊಂಡಿದ್ದಾರೆ.
ಒಳಗಡೆ ಬೃಹದಾಕಾರವಾಗಿ ಗುಂಡಿ ನಿರ್ಮಾಣವಾಗಿದ್ದು, ಸುಮಾರು ಐದಾರು ಅಡಿ ಆಳದ ವರೆಗೆ ಭೂಕುಸಿತ ಉಂಟಾಗಿದೆ.
ವಾಸವಿ ಸ್ಕೂಲ್‌ಗೆ ಹೋಗುವ ರಸ್ತೆಯಲ್ಲಿ ಭೂಕುಸಿತ ಉಂಟಾದ್ದರಿಂದ ಸ್ಥಳಿಯರು ಭಯಭೀತಗೊಂಡಿದ್ದಾರೆ. ಮಳೆಯಿಂದ ಯಾವ ಸಂದರ್ಭದಲ್ಲಿ ಏನಾಗುತ್ತೋ ಎಂಬ ಆತಂಕಕ್ಕೆ ಒಳಗಾದ ಸ್ಥಳಿಯ ನಿವಾಸಿಗಳು ಗುಂಡಿ ಮುಚ್ಚಿ ಅಂತ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.



