ಬಾಂಗ್ಲಾ ವಿರುದ್ಧ 10 ವಿಕೆಟ್ ಗಳ ಗೆಲುವು: ಏಷ್ಯಾ ಕಪ್ ಫೈನಲ್ ಗೇರಿದ ಭಾರತ!

0
Spread the love

ಬಾಂಗ್ಲಾದೇಶವನ್ನು 10 ವಿಕೆಟ್ ಗಳಿಂದ ಮಣಿಸಿದ ಭಾರತ ಮಹಿಳಾ ಕ್ರಿಕೆಟ್ ತಂಡ ಫೈನಲ್ ಗೇರಿದೆ.

Advertisement

ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 80 ರನ್ ಗಳಿಸಲಷ್ಟೇ ಶಕ್ತವಾಯಿತು. ರೇಣುಕಾ ಸಿಂಗ್, ರಾಧಾ ಯಾದವ್ ದಾಳಿಗೆ ತತ್ತರಿಸಿದ ಬಾಂಗ್ಲಾ ರನ್ ಗಳಿಸಲು ತಿಣುಕಾಡಿತು. ಬಾಂಗ್ಲಾ ಪರ ನಾಯಕಿ ನಿಗರ್ ಸುಲ್ತಾನ 32 ರನ್ ಗಲಿಸಿದರೆ ಶೊಮಾ ಅಕ್ತೆರ್ 19 ರನ್ ಗಳಿಸಿದರು.

ಈ ಸುಲಭ ಮೊತ್ತ ಬೆನ್ನತ್ತಿದ ಭಾರತಕ್ಕೆ ಭಾರತದ ಆರಂಭಿಕ ಜೋಡಿ ಸ್ಮೃತಿ ಮಂಧಾನಾ ಮತ್ತು ಶಫಾಲಿ ವರ್ಮ ಭರ್ಜರಿ ಆರಂಭ ನೀಡಿದರು. ಬಾಂಗ್ಲಾ ಬೌಲರ್ ಗಳನ್ನು ಬೆಂಡೆತ್ತಿದ ಈ ಜೋಡಿ ಮುರಿಯದ ಮೊದಲ ವಿಕೆಟ್ ಗೆ 83 ರನ್ ಗಳ ಜೊತೆಯಾಟವಾಡಿತು. ಸ್ಮೃತಿ 39 ಎಸೆತಗಳಿಂದ 55 ರನ್ ಗಳಿಸಿದರೆ ಶಫಾಲಿ 28 ಎಸೆತಗಳಿಂದ 26 ರನ್ ಗಳಿಸಿದರು. ಕೊನೆಯಲ್ಲಿ ಬೌಂಡರಿ ಮೂಲಕ ಸ್ಮೃತಿ ಭಾರತವನ್ನು ಫೈನಲ್ ಗೆ ತಲುಪಿಸಿದರು.

ಇದರೊಂದಿಗೆ ಭಾರತ 9 ಏಷ್ಯಾ ಕಪ್ ಗಳ ಪೈಕಿ ಒಂಭತ್ತನೇ ಬಾರಿಗೆ ಫೈನಲ್ ಗೇರಿದ ಸಾಧನೆ ಮಾಡಿತು. ಈ ಪೈಕಿ ಏಳು ಬಾರಿ ಭಾರತ ಇದುವರೆಗೆ ಚಾಂಪಿಯನ್ ಆಗಿದೆ.


Spread the love

LEAVE A REPLY

Please enter your comment!
Please enter your name here