ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಶಿರಹಟ್ಟಿಯಲ್ಲಿ ಬಿಜೆಪಿ ನಗರ ಘಟಕದ ವತಿಯಿಂದ ಶುಕ್ರವಾರ ಕಾರ್ಗಿಲ್ ವಿಜಯೋತ್ಸವವನ್ನು ಶಾಸಕರ ಕಾರ್ಯಾಲಯದಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಸೈನಿಕರಾದ ದೇವಪ್ಪ ಪವಾರ, ಅಮಜದ ಹೆಸರೂರ, ವೀರಯೋಧ ದಿ.ಶಬ್ಬೀರ ಅಂಗಡಿ ಸಹೋದರ ಅಲ್ತಾಫ್ ಅಂಗಡಿ ಇವರುಗಳನ್ನು ಸನ್ಮಾನಿಸಲಾಯಿತು.
ಬಿಜೆಪಿ ನಗರ ಘಟಕದ ಅಧ್ಯಕ್ಷ ನಾಗರಾಜ ಲಕ್ಕುಂಡಿ, ವೀರಣ್ಣ ಅಂಗಡಿ, ಫಕ್ಕೀರೇಶ ರಟ್ಟಿಹಳ್ಳಿ, ಗೂಳಪ್ಪ ಕರಿಗಾರ, ನಂದಾ ಪಲ್ಲೇದ, ರಾಮಣ್ಣ ಕಂಬಳಿ, ಪರಶುರಾಮ್ ಡೊಂಕಬಳ್ಳಿ, ಮಲ್ಲು ಕಬಾಡಿ, ಅನಿಲ ಪಾಶ್ಚಾಪೂರ, ಶರಣಪ್ಪ ಹೊಸೂರ, ಲಕ್ಷ್ಮಣ ಬಾರಬಾರ, ಶಶಿ ಗಾಣಗೇರ, ಮಹೇಶ ಕಲ್ಲಪ್ಪನವರ, ಜಗದೀಶ ತೇಲಿ, ಫಕ್ಕೀರೇಶ ಕರಿಗಾರ, ನಾಗೇಶ ಇಂಗಳಗಿ, ಗುಲಾಬ್ ಮಕಾನದಾರ, ಅಕ್ಬರ ಯಾದಗಿರಿ ಮುಂತಾದವರು ಉಪಸ್ಥಿತರಿದ್ದರು.



