ಗಂಟೆಗಟ್ಟಲೇ ಪಕ್ಕದಲ್ಲೇ ಕೂತಿದ್ರೂ ಒಬ್ಬರಿಗೊಬ್ಬರು ಮಾತನಾಡದ ಪಂಚಮಸಾಲಿ ಶ್ರೀಗಳು..!

0
Spread the love

ಗದಗ: ಗದಗ ನಗರದಲ್ಲಿ ನಡೆಯುತ್ತಿರುವ ಪಂಚಮಸಾಲಿ ಸಮಾಜದ ಸೇವಾ ಟ್ರಸ್ಟ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೂಡಲಸಂಗಮದ ಶ್ರೀ ಬಸವಜಯ ಮೃತ್ಯುಂಜಯ ಶ್ರೀ ಹಾಗೂ ಶ್ರೀ ವಚನಾನನಂದ ಶ್ರೀಗಳು ಅಕ್ಕಪಕ್ಕ ಕುಳಿತು ವೇದಿಕೆ ಹಂಚಿಕೊಂಡರೂ ಒಬ್ಬರಿಗೊಬ್ಬರು ಮಾತನಾಡದಿರುವ ಘಟನೆ ನಡೆದಿದೆ.

Advertisement

ನಗರದ ಕೆ ಹೆಚ್ ಪಾಟೀಲ್ ಸಭಾಭವನದಲ್ಲಿ ನಡೆಯುತ್ತಿರುವ ಕಾರ್ಯಕ್ರಮವಾಗಿದ್ದು, ಕಾರ್ಯಕ್ರಮದಲ್ಲಿ ಗಂಟೆಗಟ್ಟಲೇ ಪಕ್ಕದಲ್ಲೇ ಕೂತಿದ್ರೂ ಶ್ರೀಗಳು ಔಪಚಾರಿಕವಾಗಿಯೂ ಮಾತನಾಡಲಿಲ್ಲ,

ಇನ್ನೂ ಉಭಯ ಶ್ರೀಗಳು ಪಂಚಮಸಾಲಿ ಮೀಸಲಾತಿಗೆ 2019 ರಲ್ಲಿ ಪಾದಯಾತ್ರೆ ಮಾಡಿದ್ದರು. ಪಾದಯಾತ್ರೆ ನಂತರ ಪ್ರತ್ಯೇಕವಾಗಿ ಹೋರಾಟ ಮಾಡಿಕೊಂಡು ಬಂದಿದ್ದರು. ಈ ಹಿಂದೆಯೇ ಸಮಾಜದ ಇಬ್ಬರು ಶ್ರೀಗಳ ಮಧ್ಯೆ ಮುನಿಸು ಎಂಬ ಚರ್ಚೆಯಾಗಿತ್ತು. ಇನ್ನೂ ಈ ಕಾರ್ಯಕ್ರಮದಲ್ಲಿ ಸಚಿವ ಹೆಚ್ ಕೆ ಪಾಟೀಲ್ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಹಲವು ಶಾಸಕರು, ಮುಖಂಡರು ಭಾಗಿಯಾಗಿದ್ದರು.


Spread the love

LEAVE A REPLY

Please enter your comment!
Please enter your name here