HomeGadag Newsಗಣಪತಿ ಹಬ್ಬ ಕೇವಲ ಮೋಜು ಆಗದಿರಲಿ : ಬಾಬು ಬಾಕಳೆ

ಗಣಪತಿ ಹಬ್ಬ ಕೇವಲ ಮೋಜು ಆಗದಿರಲಿ : ಬಾಬು ಬಾಕಳೆ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಗದಗ ಬೆಟಗೇರಿಯ ಟರ್ನಲ್ ಪೇಟ್‌ನಲ್ಲಿ ಕ್ರಾಂತಿ ಸೇನಾ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ಮಾಡುವ ಕುರಿತು ಕ್ರಾಂತಿ ಸೇನಾ ಕಾರ್ಯಾಲಯದಲ್ಲಿ ಸಭೆ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಕ್ರಾಂತಿ ಸೇನಾ ಗದಗ ಜಿಲ್ಲಾಧ್ಯಕ್ಷ ಬಾಬು ಬಾಕಳೆ ಮಾತನಾಡಿ, ಬೆಟಗೇರಿಯಲ್ಲಿ ಕ್ರಾಂತಿ ಸೇನಾ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ಮಾಡುವುದಾಗಿ ನಿರ್ಧರಿಸಿರುವುದು ಖುಷಿಯ ವಿಚಾರ. ಗಣಪತಿ ಹಬ್ಬ ಕೇವಲ ಮೋಜು-ಮಸ್ತಿ ಆಗಬಾರದು. ನಾವೆಲ್ಲರೂ ಈ ಹಬ್ಬವನ್ನು ಯಾವುದಾದರೊಂದು ಬಡ ಕುಟುಂಬಕ್ಕೆ ಆಸರೆ ಆಗುವಂತಹ ಕೆಲಸವನ್ನು ಮಾಡಿ, ಗಣಪತಿ ಹಬ್ಬಕ್ಕೆ ಸಮರ್ಪಿಸೋಣ ಎಂದು ಹೇಳಿದರು.

ಜಿಲ್ಲಾ ಗೌರವ ಕಾರ್ಯದರ್ಶಿ ಪ್ರವೀಣ ಹಬೀಬ ಮಾತನಾಡಿ, ಈ ಬಾರಿ ಬೆಟಗೇರಿಯಲ್ಲಿ ಕ್ರಾಂತಿ ಸೇನಾ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ಮಾಡಿ ನಾವೆಲ್ಲರೂ ಗಣಪತಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸೋಣ ಎಂದು ಹೇಳಿದರು.

ಗದಗ ಜಿಲ್ಲಾ ಮಹಿಳಾ ಅಧ್ಯಕ್ಷೆ ರಾಣಿ ಚಂದಾವರಿ ಮಾತನಾಡಿದರು. ಮಹಿಳಾ ಗೌರವ ಕಾರ್ಯದರ್ಶಿ ರೇಣುಕಾ ಕಬಾಡಿ, ಮಹಿಳಾ ಖಜಾಂಚಿ ಅಕ್ಷತಾ ಪವಾರ್, ರವಿತೇಜ ಶ್ಯಾವಿ, ಶಿವಕುಮಾರ್ ಕುಂಬಾರ, ವಿನಾಯಕ ಕಾಟವಾ, ಬಸವರಾಜ ತಟ್ಟಿ, ಕಿರಣ್ ಪಟ್ಟಣಶೆಟ್ಟಿ, ಪ್ರದೀಪ್ ಸರ್ವಾದೆ, ರಾಮು ಕಬಾಡಿ, ವಿನಯ್ ಬಾಂಡಗೆ, ಪವನ್ ಪುರದ್, ರಾಮಣ್ಣ ನವಲಗುಂದ್, ಸುನಿಲ್ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img