ನವೀಲು ತೀರ್ಥ ಡ್ಯಾಂನಿಂದ ನೀರು ರಿಲೀಸ್: ಹೊಳೆ ಆಲೂರ ಸೇತುವೆ ಮುಳುಗಡೆ

0
Spread the love

ಗದಗ: ಬೆಳಗಾವಿ ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಅದಲ್ಲದೆ ನವೀಲು ತೀರ್ಥ ಡ್ಯಾಂ ನಿಂದ ಅಪಾರ ನೀರು ರಿಲೀಸ್ ಆಗಿದ್ದು, ಮಲಪ್ರಭಾ ನದಿ ಉಕ್ಕಿ ಹರಿಯುತ್ತಿದೆ.

Advertisement

ಹೊಳೆಆಲೂರು-ಬದಾಮಿ ಸಂಪರ್ಕ ಹೊಂದಿದ್ದ ಗದಗ ಜಿಲ್ಲೆ ರೋಣ ತಾಲೂಕಿನ ಹೊಳೆಆಲೂರು ಬಳಿಯ ಮಲಪ್ರಭಾ ನದಿಯ ಸೇತುವೆ ಮುಳುಗಡೆಯಾಗಿದೆ.

ಮಲಪ್ರಭಾ ನದಿಗೆ 5 ಸಾವಿರ ಕುಸ್ಯೆಕ್ ನೀರು ಬಿಡುಗಡೆ ಹಿನ್ನೆಲೆ ಸೇತುವೆ ಜಲಾವೃತವಾಗಿ ಪ್ರಯಾಣಿಕರು ಪರದಾಟ ನಡೆಸುವಂತ ಸ್ಥಿತಿ ನಿರ್ಮಾಣವಾಗಿದೆ.

ಬದಾಮಿ-ಹೊಳೆಆಲೂರ ಸಂಪರ್ಕ ಕಲ್ಪಿಸುವ ಸೇತುವೆ ಆಗಿದ್ದು, ಇದರಿಂದ ನದಿಯ ಪಾತ್ರದ ಗ್ರಾಮಗಳಿಗೆ ಪ್ರವಾಹದ ಭೀತಿ ಎದುರಾಗಿದೆ. ಸೇತುವೆ ಬಳಿ ಬ್ಯಾರಿಕೆಡ್ ಹಾಕಿ ನದಿ ದಾಟದಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.


Spread the love

LEAVE A REPLY

Please enter your comment!
Please enter your name here