ವಿದ್ಯುತ್ ಸಮಸ್ಯೆ: ಬೆಂಗಳೂರಿನ ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಸ್ಥಗಿತ!

0
Spread the love

ಬೆಂಗಳೂರು:- ವಿದ್ಯುತ್ ಸಮಸ್ಯೆಯಿಂದ ರಾಜಧಾನಿ ಬೆಂಗಳೂರಿನ ಸಿಲ್ಕ್ ಇನ್ಸ್ಟಿಟ್ಯೂಟ್ ನಿಂದ ಆರ್​ವಿ ರಸ್ತೆವರೆಗೆ ಮೆಟ್ರೋ ಸೇವೆ ತಾತ್ಕಾಲಿಕವಾಗಿ ಸ್ಥಗಿತವಾಗಿದೆ.

Advertisement

ಬೆಂಗಳೂರು ನಮ್ಮ ಗ್ರೀನ್​​​ ಲೈನ್ ಹಳಿಯಲ್ಲಿ ತಾಂತ್ರಿಕ ದೋಷ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ಆರ್​ವಿ ರಸ್ತೆಯಿಂದ ರೇಷ್ಮೆ ಸಂಸ್ಥೆ ವರೆಗಿನ ಮೆಟ್ರೋ ಸಂಚಾರ ಸ್ಥಗಿತಗೊಂಡಿದೆ.

ಈ ಬಗ್ಗೆ BMRCL ಮಾಹಿತಿ ನೀಡಿದ್ದು, ಇಂದು ಸಂಜೆ 5.33ರಿಂದ ವಿದ್ಯುತ್ ಸರಬರಾಜು ವ್ಯವಸ್ಥೆಯಲ್ಲಿ ಸಮಸ್ಯಯಾಗಿದೆ. ನಾಗಸಂದ್ರದಿಂದ ಆರ್ ವಿ ರೋಡ್ ವರೆಗೆ ಮಾತ್ರ ಮೆಟ್ರೋ ಸಂಚಾರ ಇದ್ದು, ಆರ್​ವಿ ರಸ್ತೆಯಿಂದ ರೇಷ್ಮೆ ಸಂಸ್ಥೆವರೆಗೆ ಮೆಟ್ರೋ ಸಂಚಾರ ಸ್ಥಗಿತವಾಗಿದೆ ಎಂದು ಹೇಳಿದೆ.


Spread the love

LEAVE A REPLY

Please enter your comment!
Please enter your name here