ಬೆಳಗಾವಿ: ಯತ್ನಾಳ್ ಅವರ ಬಗ್ಗೆ ಅಪಾರ ಗೌರವಿದೆ. ಅವರಿಗೆ ಇಂತಹ ಹೇಳಿಕೆಗಳು ಶೋಭೆ ತರುವುದಿಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶಾಸಕ ಯತ್ನಾಳ್ ಅವರು, ಬೇಕಿದ್ದರೆ ತಮ್ಮ ಪಕ್ಷದ ಬಗ್ಗೆ ಮಾತಾಡಲಿ, ಇನ್ನೊಂದು ಪಕ್ಷದ ಬಗ್ಗೆ ಮಾತನಾಡುವುದು ಬೇಡ. ಅವರಿಗೆ ಗೊಂದಲ ಸೃಷ್ಟಿಸುವುದೇ ಕೆಲಸ.
ಅನಾವಶ್ಯಕ ಹೇಳಿಕೆಗಳಿಂದ ಗೊಂದಲ ಸೃಷ್ಟಿ ಮಾಡಿ , ಸಿಎಂ, ಡಿಸಿಎಂ ನಡುವೆ ತಂದಿಡುವ ಕೆಲಸವನ್ನು ಮೊದಲು ಬಿಡಲಿ ಎಂದು ಸಚಿವರು ತಿರುಗೇಟು ನೀಡಿದರು. ಸಿಎಂ, ಡಿಸಿಎಂ ಇಬ್ಬರೂ ಮುತ್ಸದ್ದಿ ರಾಜಕಾರಣಿಗಳು. ನಮ್ಮ ಪಕ್ಷದಲ್ಲಿ ಮುಖ್ಯಮಂತ್ರಿ ಮಾಡುವುದು ಪಕ್ಷದ ಶಾಸಕರು ಹಾಗೂ ಹೈಕಮಾಂಡೇ ಹೊರತು ಬಿಜೆಪಿ ರಾಜ್ಯಾಧ್ಯಕ್ಷರಲ್ಲ. ಒಳ ಒಪ್ಪಂದ ರಾಜಕಾರಣದ ಮಾತನ್ನು ಇನ್ಮುಂದಾದರೂ ಯತ್ನಾಳ್ ನಿಲ್ಲಿಸಲಿ ಎಂದು ಹೇಳಿದರು.



