ವಿಜಯಸಾಕ್ಷಿ ಸುದ್ದಿ, ಡಂಬಳ : ಪ್ರತಿ ವಿದ್ಯಾರ್ಥಿಯ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಕ್ರೀಡೆಗಳಲ್ಲಿ ಭಾಗವಹಿಸುವುದು ಬಹಳ ಅವಶ್ಯಕ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಲೀಲಾ ದೇವಪ್ಪ ಬಂಡಿಹಾಳ ಹೇಳಿದರು.
ಡಂಬಳ ಗ್ರಾಮದ ಡಿಪಿಇಪಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ವಲಯ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಎಸ್‌ಡಿಎಮ್‌ಸಿ ಅಧ್ಯಕ್ಷ ಗೌಸಿದ್ಧಪ್ಪ ಹಾದಿಮನಿ ಮಾತನಾಡಿ, ಮಕ್ಕಳ ಆಸಕ್ತಿ ಗುರುತಿಸಿ ಪಾಲಕರು, ಕ್ರೀಡಾ ಶಿಕ್ಷಕರು ಅವರಿಗೆ ಪ್ರೋತ್ಸಾಹ ನೀಡುವುದರ ಮೂಲಕ ಗ್ರಾಮೀಣ ಕ್ರೀಡೆಗಳಿಗೆ ಆದ್ಯತೆ ನೀಡಬೇಕು. ಗ್ರಾಮೀಣ ಮಟ್ಟದಲ್ಲಿ ಕ್ರೀಡೆಯಲ್ಲಿ ಸಾಧನೆ ಮಾಡುವ ಮಕ್ಕಳು ರಾಷ್ಟçಮಟ್ಟದಲ್ಲಿ ಸಾಧನೆ ಮಾಡುವಂತಾಗಲಿ ಎಂದು ಹಾರೈಸಿದರು.
ಬಾಲಕರ ಗುಂಪು ಆಟಗಳಾದ ಖೋ ಖೋ, ಥ್ರೋ ಬಾಲ್, ವಾಲಿಬಾಲ್, ಕಬಡ್ಡಿಯಲ್ಲಿ ಎಮ್‌ಸಿಎಸ್ ಶಾಲೆಯ ವಿದ್ಯಾರ್ಥಿಗಳು ಪ್ರಥಮ, ಬಾಲಕಿಯರ ಗುಂಪು ಆಟದಲ್ಲಿ ಥ್ರೋಬಾಲ್, ಕಬಡ್ಡಿಯಲ್ಲಿ ಕೆ.ಜಿ.ಎಸ್ ಶಾಲೆ, ಖೋ ಖೋ ಕೆ.ಜಿ.ಬಿ.ವಿ ಶಾಲೆಯ ವಿದ್ಯಾರ್ಥಿನಿಯರು ಪ್ರಥಮ ಸ್ಥಾನ ಪಡೆದರು.
100ಮೀ ಓಟ ಮಂಜುನಾಥ ಬೆನಾಳ ಪ್ರಥಮ, ಸೂರಜ ಲಮಾಣಿ ದ್ವಿತೀಯ, 200ಮೀ ಓಟ ಅನಿಲ ರಾಜೂರ ಪ್ರಥಮ, ಪಾಂಡುರಂಗ ಆದಮ್ಮನವರ ದ್ವಿತೀಯ, 400ಮೀ ಯಲ್ಲಪ್ಪ ಕದಡಿ ಪ್ರಥಮ, ಅಭಿಷೇಕ ಬಂಡಿ ದ್ವಿತೀಯ, 80 ಮೀ ಅಡೆತಡೆ ಓಟ ಸೂರಜ ಲಮಾಣಿ ಪ್ರಥಮ, ಯಲ್ಲಪ್ಪ ಕದಡಿ ದ್ವಿತೀಯ, 600ಮೀ ಹನುಮಂತ ಶಿರುಂದ ಪ್ರಥಮ, ಶಿವಾನಂದ ಹಾದಿಮನಿ ದ್ವಿತೀಯ, 400ಮೀ ರಿಲೆ ದೇವರಾಜ ದಾಸರು ಸಂಗಡಿಗರು, ಬಾಲಕಿಯರ ವೈಯಕ್ತಿಕ ಕ್ರೀಡಾ ಕೂಟದಲ್ಲಿ 100ಮೀ ನೇತ್ರಾ ಒಂಟೆಲಭೋವಿ ಪ್ರಥಮ, ಅರ್ಪಿತಾ ಲಮಾಣಿ ದ್ವಿತೀಯ, 200ಮೀ ನೇತ್ರಾ ಒಂಟೆಲಭೋವಿ ಪ್ರಥಮ, ಭಾಗ್ಯ ಬೂದಿಹಾಳ ದ್ವಿತೀಯ, 400 ಮೀ ಚೈತ್ರಾ ಕೂಲಿ ಪ್ರಥಮ, ಪ್ರೀತಿ ಪೂಜಾರ ದ್ವಿತೀಯ, 600ಮೀ ಚಂದ್ರಿಕಾ ತಳವಾರ ಪ್ರಥಮ, ಅಕ್ಷತಾ ಜಕ್ಕಲಿ, 80ಮೀ ಅಡತಡೆ ನೇತ್ರಾ ಒಂಟೆಲಭೋವಿ ಪ್ರಥಮ, ಅರ್ಪಿತಾ ಲಮಾಣಿ ದ್ವಿತೀಯ, 400ಮೀ ರಿಲೆ ನೇತ್ರಾ ಒಂಟೆಲಭೋವಿ ಸಂಗಡಿಗರು ಸ್ಥಾನ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ತಾಲೂಕಾ ದೈಹಿಕ ಶಿಕ್ಷಾಣಾಧಿಕಾರಿ ಬಸವಣ್ಣೆಪ್ಪ, ಗ್ರಾ.ಪಂ ಉಪಾಧ್ಯಕ್ಷೆ ಲಕ್ಷ್ಮವ್ವ ಕಾಶಭೋವಿ, ಕುಮಾರ ಮಾನೆ, ಬಸಮ್ಮ ಹಾದಿಮನಿ, ಜಿ.ವಿ. ಹಿರೇಮಠ, ನಟರಾಜ ಬಳ್ಳಾರಿ, ಕೆ.ಎಮ್. ಗೊರವರ, ಮಂಜುನಾಥ ಸಂಜಿನ್ನವರ, ರಂಗಪ್ಪ ಜೋಂಡಿ, ಮರಿತೆಮಪ್ಪ ಆದಮ್ಮನವರ, ಸಿಆರ್‌ಪಿ ಮೃಂತುಜ್ಯಯ ಪೂಜಾರ, ಡಿಪಿಇಪಿ ಮುಖ್ಯೋಪಾಧ್ಯಾಯೆ ಎಸ್.ಜಿ. ಪಾಟೀಲ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ವಾಸಪ್ಪ ಕಾಶಭೋವಿ, ಕಾಶಿಮಲಿ ಬೆನಕೊಪ್ಪ, ಕೃಷ್ಣಪ್ಪ ಪೂಜಾರ, ಸುಶೀಲಾ ಚಲವಾದಿ, ಮಾಜಿ ಸೈನಿಕರು, ಶಾಲಾ ಗುರುವೃಂದ, ದೈಹಿಕ ಶಿಕ್ಷಕರು, ಕ್ರೀಡಾ ಅಭಿಮಾನಿಗಳು ಪಾಲಕರು, ವಿದ್ಯಾರ್ಥಿಗಳು ಇದ್ದರು.