ಮುಡಾ ಹಗರಣ: ಇಂದಿನಿಂದ ಮೈತ್ರಿ ನಾಯಕರ ಮೈಸೂರು ಚಲೋ ಶುರು!

0
Spread the love

ಬೆಂಗಳೂರು:- ಇಂದಿನಿಂದ ಬಿಜೆಪಿ, ಜೆಡಿಎಸ್‌ ಪಾದಯಾತ್ರೆ ಶುರುಮಾಡ್ತಿದೆ. ಮೈತ್ರಿ ಯಾತ್ರೆ ಸಾಗೋ ದಾರಿಯುದ್ದಕ್ಕೂ ಕಾಂಗ್ರೆಸ್‌ ಜನಾಂದೋಲನ ಸಭೆ ಶುರುಮಾಡಿದೆ. ಅಷ್ಟೇ ಅಲ್ಲ ಭ್ರಷ್ಟ ಬಿಜೆಪಿ ಕಳ್ಳರ ಪಾದಯಾತ್ರೆ ಅನ್ನೋ ಪೋಸ್ಟರ್‌ಗಳನ್ನೂ ಕಾಂಗ್ರೆಸ್‌‌‌ ಅಂಟಿಸಿದೆ.

Advertisement

ಮುಡಾ ಹಗರಣ, ವಾಲ್ಮೀಕಿ ಹಗರಣ, ಎಸ್‌‌ಸಿ ಎಸ್‌ಟಿ ಹಣ ದುರ್ಬಳಕೆ ವಿರುದ್ಧ ಬಿಜೆಪಿ-ಜೆಡಿಎಸ್‌‌ನವರು ಬೆಂಗಳೂರಿಂದ ಮೈಸೂರಿಗೆ ಪಾದಯಾತ್ರೆ ಶುರುಮಾಡ್ತಿದ್ದಾರೆ. ಆದರೆ ಮೈತ್ರಿ ಪಾದಾಯತ್ರೆಗೂ ಮೊದಲೇ ಕಾಂಗ್ರೆಸ್‌‌ನವರು ನಿನ್ನೆ ಜನಾಂದೋಲನ ಜಾತ್ರೆ ಮಾಡಿದ್ದರು.

ಕಾಂಗ್ರೆಸ್‌ ಜನಾಂದೋಲನ ಸಭೆಗೂ ಮುನ್ನ ಬೈಕ್ ಱಲಿ ನಡೆಯಿತು. ಮಾಗಡಿ ಶಾಸಕ ಬಾಲಕೃಷ್ಣ ಜೊತೆ ಬುಲೆಟ್‌ ಏರಿದ ಡಿಕೆಶಿವಕುಮಾರ್‌ ಬೈಕ್‌ ಱಲಿ ಮಾಡಿದ್ದರು. ಕೇಂದ್ರ NDA ಸರ್ಕಾರ ಕರ್ನಾಟಕಕ್ಕೆ ಅನ್ಯಾಯ ಮಾಡ್ತಿದೆ ಅನ್ನೋದು ಅಜೆಂಡಾ. ಆದರೆ ಟಾರ್ಗೆಟ್‌ ಆಗಿದ್ದು ಕಾಂಗ್ರೆಸ್‌ ನಾಯಕರಿಗೆ ಟಾರ್ಗೆಟ್‌ ಆಗಿದ್ದು ಬಿಜೆಪಿ ಮತ್ತು ಜೆಡಿಎಸ್‌‌ ನಾಯಕರು, ವಿಜಯೇಂದ್ರ ಮೇಲೆ ಡಿಕೆ ಶಿವಕುಮಾರ್ ಏಕವಚನದಲ್ಲೇ ವಾಗ್ದಾಳಿ ಮಾಡಿದ್ದರು. ಜೆಡಿಎಸ್‌‌‌ ಜೊತೆ ಬಿಜೆಪಿ ಡೈವೋರ್ಸ್‌ ಆಗುತ್ತೆ ಅಂತ ಪರಮೇಶ್ವರ್‌. ಬಿಜೆಪಿಯಲ್ಲೇ ಅತೀ ಹೆಚ್ಚು ಭ್ರಷ್ಟರು ಅಂತ ಜಮೀರ್‌ ಅಹ್ಮದ್‌‌ ವಾಗ್ದಾಳಿ ನಡೆಸಿದರು.

ಬಿಜೆಪಿ ಪಾದಯಾತ್ರೆ ಸಾಗುವ ಮೈಸೂರು ರಸ್ತೆಯಲ್ಲಿ ಬಿಜೆಪಿ ನಾಯಕರ ವಿರುದ್ಧ ಭ್ರಷ್ಟ ಬಿಜೆಪಿ ಕಳ್ಳರ ಪಾದಯಾತ್ರೆಗೆ ಸ್ವಾಗತ ಅಂತ ಕಾಂಗ್ರೆಸ್‌ ಪೋಸ್ಟರ್​ ಅಂಟಿಸಿದೆ. ಈ ಮೂಲಕ ಮೈತ್ರಿಪಕ್ಷಗಳ ಪಾದಯಾತ್ರೆಗೆ ಕಾಂಗ್ರೆಸ್ ತಿರುಗೇಟು ಕೊಟ್ಟಿದೆ

ಇನ್ನು, ಬಿಜೆಪಿ ಪಾದಯಾತ್ರೆಗೆ ಬಿಜೆಪಿಯಲ್ಲೇ ವಿರೋಧವಿದೆ. ವಿಜಯೇಂದ್ರ ಅಶೋಕ್‌‌ ಜೊತೆ ಹೆಜ್ಜೆ ಹಾಕದೇ ಯತ್ನಾಳ್‌‌ ಅಂಡ್‌ ಟೀಂ ಪ್ರತ್ಯೇಕ ಪಾದಯಾತ್ರೆಗೆ ಸಭೆ ಮಾಡಿತ್ತು. ಮೈತ್ರಿ ಪಾದಯಾತ್ರೆ ಇಂದು ಬೆಳಗ್ಗೆ 8.30ಕ್ಕೆ ಕೆಂಪಮ್ಮ ದೇವಸ್ಥಾನದಿಂದ ಶುರುವಾಗ್ತಿದೆ. ಯಡಿಯೂರಪ್ಪ, ಪ್ರಲ್ಹಾದ್​ ಜೋಶಿ, ಕುಮಾರಸ್ವಾಮಿ ಭಾಗಿಯಾಗ್ತಿದ್ದಾರೆ.


Spread the love

LEAVE A REPLY

Please enter your comment!
Please enter your name here