HomeGadag Newsಜೀವನದಲ್ಲಿ ಶಿಸ್ತು, ಕ್ರಮಬದ್ಧತೆ ಮುಖ್ಯ : ಪಂ.ರಾಜಗುರು ಗುರುಸ್ವಾಮಿ

ಜೀವನದಲ್ಲಿ ಶಿಸ್ತು, ಕ್ರಮಬದ್ಧತೆ ಮುಖ್ಯ : ಪಂ.ರಾಜಗುರು ಗುರುಸ್ವಾಮಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಭಾರತೀಯ ಸಂಸ್ಕೃತಿ ಸಂಸ್ಕಾರ ಮೇರುಪಂಕ್ತಿಯಲ್ಲಿದೆ. ಇಂತಹ ಆದರ್ಶ ಮತ್ತು ಮೌಲ್ಯಯುತ ಸಂಸ್ಕಾರ-ಸಂಸ್ಕೃತಿಗಳು ಗುರುವಿನ ಕೃಪೆ, ಮಾರ್ಗದರ್ಶನದಿಂದ ಬಂದಿವೆ ಎಂದು ಕನಕ-ಪುರಂದ ಪ್ರಶಸ್ತಿ ಪುರಸ್ಕೃತ ಹಿರಿಯ ಸಂಗೀತ ಕಲಾವಿದ ಪಂ.ರಾಜಗುರು ಗುರುಸ್ವಾಮಿ ಕಲಕೇರಿ ಹೇಳಿದರು.
ಅವರು ಇತ್ತೀಚೆಗೆ ಗದುಗಿನ ರೋಟರಿ ಐಕೇರ್ ಸೆಂಟರ್‌ನಲ್ಲಿ ರೋಟರಿ ಕ್ಲಬ್ ಗದಗ-ಬೆಟಗೇರಿ, ಇನ್ನರ್‌ವ್ಹೀಲ್ ಕ್ಲಬ್ ಹಾಗೂ ಸಂಸ್ಕಾರ ಭಾರತಿ ಗದಗ ಜಿಲ್ಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಗುರುಪೂರ್ಣಿಮೆ ನಿಮಿತ್ತ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಮಾತನಾಡಿದರು.
ಪ್ರತಿಯೊಬ್ಬರ ಜೀವನದಲ್ಲಿ ಶಿಸ್ತು ಮತ್ತು ಕ್ರಮಬದ್ಧತೆ ಮುಖ್ಯ. ಬದುಕು ಶೃತಿಗೊಳಿಸಿದ ವೀಣೆಯಂತಾಗಬೇಕು, ಸುಮಧುರ ಸಂಗೀತದಂತಿರಬೇಕು. ಪ್ರತಿಯೊಬ್ಬರ ಜೀವನದಲ್ಲೂ ಏನನ್ನಾದರೂ ಸಾಧಿಸಬೇಕೆಂಬ ಛಲವನ್ನು ಹೊಂದಿರಬೇಕು. ಮುಂದೆ ಗುರಿ, ಹಿಂದೆ ಗುರು ಇದ್ದರೆ ಮಾತ್ರ ಸಾಧನೆ ಸಾಕಾರಗೊಳ್ಳುವದು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಅಧ್ಯಕ್ಷ ಡಾ. ಆರ್.ಬಿ.ಉಪ್ಪಿನ ಸಂದರ್ಬೋಚಿತವಾಗಿ ಮಾತನಾಡಿದರು. ವೇದಿಕೆಯ ಮೇಲೆ ಸಂಸ್ಕಾರ ಭಾರತಿ ಪ್ರಾಂತ ಕಾರ್ಯದರ್ಶಿ ಮಾರುತಿ ಹುಟಗಿ, ಪ್ರೊ. ದತ್ತಪ್ರಸನ್ ಪಾಟೀಲ, ರೋಟರಿ ಕ್ಲಬ್ ಕಾರ್ಯದರ್ಶಿ ಸಂತೋಷ ಅಕ್ಕಿ, ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ನಾಗರತ್ನಾ ಮಾರನಬಸರಿ, ಕಾರ್ಯದರ್ಶಿ ಪ್ರೊ.ವೀಣಾ ತಿರ್ಲಾಪೂರ ಉಪಸ್ಥಿತರಿದ್ದರು.
ಪ್ರೇಮಾ ಹಂದಿಗೋಳ ಪ್ರಾರ್ಥಿಸಿದರು, ಶ್ರೀಧರ ಸುಲ್ತಾನಪೂರ ಸ್ವಾಗತಿಸಿದರು. ಶಿವಯೋಗಿ ಗಡ್ಡದಮಠ ನಿರೂಪಿಸಿದರು. ಸಂತೋಷ ಅಕ್ಕಿ ವಂದಿಸಿದರು. ನಟವರಿ ಕಲಾ ಪರಿಷತ್ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಕ್ಲಬ್ ಅಸಿಸ್ಟಂಟ್ ಗವರ್ನರ್ ಶಿವಾಚಾರ್ಯ ಹೊಸಳ್ಳಿಮಠ, ಡಾ. ಶೇಖರ ಸಜ್ಜನ, ಎಚ್.ಎಸ್. ಪಾಟೀಲ, ಸುರೇಶ ಕುಂಬಾರ, ಬಾಲಕೃಷ್ಣ ಕಾಮತ್, ಚಂದ್ರಮೌಳಿ ಜಾಲಿ, ಡಾ. ವ್ಹಿ.ಸಿ. ಕಲ್ಮಠ, ಅರವಿಂದಸಿಂಗ್ ಬ್ಯಾಳಿ, ಅಕ್ಷಯ ಶೆಟ್ಟಿ, ಡಾ. ಪ್ರದೀಪ ಉಗಲಾಟ, ಪ್ರೇಮಾ ಗುಳಗೌಡ್ರ, ಸುಮಾ ಪಾಟೀಲ, ಪುಷ್ಪಾ ಭಂಡಾರಿ, ಸುನಿತಾ ಬುರಡಿ, ಶಾಂತ ಗೌಡರ, ರೇಶ್ಮಾ ಬಸರಿಗಿಡದ, ಮೀನಾಕ್ಷಿ ಕೊರವನವರ, ಜ್ಯೋತಿ ದಾನಪ್ಪಗೌಡ್ರ, ಸುವರ್ಣಾ ಮದರಿಮಠ, ಅಶ್ವಿನಿ ಜಗತಾಪ, ಉಮಾ ಕವಳಿಕಾಯಿ ಮುಂತಾದವರಿದ್ದರು.
ಸಮಾರಂಭದಲ್ಲಿ ಹಿರಿಯ ಸಂಗೀತ ಕಲಾವಿದ ಪಂ.ರಾಜಗುರು ಗುರುಸ್ವಾಮಿ ಕಲಕೇರಿ, ನಾಟಕ ಅಕಾಡೆಮಿ ಪ್ರಸಸ್ತಿ ಪುರಸ್ಕೃತ ಹಿರಿಯ ರಂಗಕರ್ಮಿ ಆರ್.ಎನ್. ಕುಲಕರ್ಣಿ, ಹಿರಿಯ ರೇಖಾಚಿತ್ರ ಕಲಾವಿದ ಪುಂಡಲೀಕ ಕಲ್ಲಿಗನೂರ, ಹಿರಿಯ ನೃತ್ಯ ಕಲಾವಿದೆ ವಿದುಷಿ ವಿದ್ಯಾ ಮೊರಬ, ಜಾನಪದ ಅಕಾಡೆಮಿ ಸದಸ್ಯ ಹಾಗೂ ಹಿರಿಯ ಕಲಾವಿದ ಶಂಕ್ರಣ್ಣ ಸಂಕಣ್ಣವರ ಮತ್ತು ಆರ್.ಎಸ್. ಬುರಡಿ ಅವರನ್ನು ಸನ್ಮಾನಿಸಲಾಯಿತು.

Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!