ವಿಜಯಸಾಕ್ಷಿ ಸುದ್ದಿ, ಮುಳಗುಂದ : ಇತ್ತೀಚೆಗೆ ಮುಳಗುಂದದ ಎಸ್.ಜೆ.ಜೆ.ಎಮ್. ಪ್ರೌಢಶಾಲಾ ಮೈದಾನದಲ್ಲಿ ನಡೆದ ಪ್ರಾಥಮಿಕ ಶಾಲಾ ಕ್ರೀಡಾಕೂಟದಲ್ಲಿ ವಾಲಿಬಾಲ್ ಪಂದ್ಯಾವಳಿಯಲ್ಲಿ ಸರಕಾರಿ ಮಾದರಿ ಪ್ರಾಥಮಿಕ ಕನ್ನಡ ಹೆಣ್ಣುಮಕ್ಕಳ ಶಾಲೆಯ ಬಾಲಕಿಯರು ತಾಲೂಕಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಮುಖ್ಯ ಶಿಕ್ಷಕ ಡಾ. ಎಸ್.ವಿ. ತಮ್ಮನಗೌಡ್ರ, ಶಿಕ್ಷಕರಾದ ಪಂಚಾಕ್ಷರಯ್ಯ ಮರಿದೇವರಮಠ, ಶ್ಯಾಮ್ ಸರ್ವದೆ, ಸಿ.ಆರ್.ಪಿ. ವiಹಾಂತೇಶ ನಿಂಬನಾಯ್ಕರ್, ಶೋಭಾ ಪಾಟೀಲ, ಕೆ.ಎಸ್. ಗಾಣಿಗೇರ, ಆರ್.ಎಂ. ರೋಣದ ಇವರ ಮಾರ್ಗದರ್ಶನದಲ್ಲಿ ಥ್ರೋಬಾಲ್‌ನಲ್ಲಿ ದ್ವಿತೀಯ, ಖೋ ಖೋ ಪಂದ್ಯಾವಳಿಯಲ್ಲಿ ದ್ವಿತೀಯ, ವೈಯಕ್ತಿಕ ಆಟದಲ್ಲಿ ದಿವ್ಯಶ್ರೀ ಮ್ಯಾಗೇರಿ ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆಯುವುದರೊಂದಿಗೆ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ.
ಎಸ್.ಡಿ.ಎಮ್.ಸಿ. ಅಧ್ಯಕ್ಷ ಮಹಾಂತೇಶ ಎಸ್.ಕಣವಿ ಸೇರಿದಂತೆ ಸದಸ್ಯರು, ಗ್ರಾಮಸ್ಥರು ವಿದ್ಯಾರ್ಥಿಗಳಿಗೆ ಅಭಿನಂದಿಸಿದರು. ಈ ಸಂದರ್ಭದಲ್ಲಿ ಶ್ಯಾಮ ಸರ್ವದೆ, ಶೋಭಾ ಪಾಟೀಲ, ಕೆ.ಎಸ್. ಗಾಣಿಗೇರ, ಆರ್.ಎಂ. ರೋಣದ ಉಪಸ್ಥಿತರಿದ್ದರು.



