ಪೊಲೀಸರ ಮೇಲೆ ದಾಳಿ: ನಟೋರಿಯಸ್ ರೌಡಿ‌ ಶೀಟರ್ ಕಾಲಿಗೆ ಗುಂಡೇಟು!

0
Spread the love

ಬೆಂಗಳೂರು:- ನಟೋರಿಯಸ್ ರೌಡಿಶೀಟರ್ ವೆಂಕಟರಾಜು ಅಲಿಯಾಸ್ ತುಕಡಿ ಮೇಲೆ ಜಿಗಣಿ ಇನ್ಸ್ ಪೆಕ್ಟರ್ ಮಂಜುನಾಥ್ ಫೈರಿಂಗ್ ಮಾಡಿ, ಬಂಧಿಸಿದ ಘಟನೆ ಬೆಂಗಳೂರು ಹೊರ ವಲಯದ ಆನೇಕಲ್ ತಾಲೂಕಿನ ರಾಗಿಹಳ್ಳಿ ಬಳಿ ಜರುಗಿದೆ.

Advertisement

ನಟೋರಿಯಸ್ ರೌಡಿಶೀಟರ್ ವೆಂಕಟರಾಜು ಅಲಿಯಾಸ್ ತುಕಡಿ ಮೇಲೆ ಜಿಗಣಿ ಇನ್ಸ್ ಪೆಕ್ಟರ್ ಮಂಜುನಾಥ್ ಫೈರಿಂಗ್ ಮಾಡಿ ಅರೆಸ್ಟ್ ಮಾಡಿದ್ದಾರೆ. ಇನ್ನೂ ಆತನನ್ನು ಅರೆಸ್ಟ್​ ಮಾಡಲು ಹೋದಾಗ ಕ್ರೈಂ ಸಿಬ್ಬಂದಿ ವಿನಯ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾನೆ. ಮೊದಲು ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿ ಶರಣಾಗುಂತೆ ವಾರ್ನಿಂಗ್ ಮಾಡಿದ್ದಾರೆ. ಅದಕ್ಕೆ ಕೇಳದೆ ಇದ್ದಾಗ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಹೀಗಾಗಿ ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದ್ದಾರೆ.

ಕಳೆದ ಎರಡು ತಿಂಗಳ ಹಿಂದೆ ರೌಡಿ ಶೀಟರ್ ವೆಂಕಟರಾಜು, ಶೆಟ್ಟಿಹಳ್ಳಿ ಬಳಿ ಕೊಲೆ ಯತ್ನ ನಡೆಸಿದ್ದ. ಈ ಹಿನ್ನಲೆ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ 307 ಪ್ರಕರಣ ದಾಖಲು ಮಾಡಲಾಗಿತ್ತು.

ಅಂದಿನಿಂದ ಪೊಲೀಸರು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದರು. ಕೊಲೆ, ಕೊಲೆ ಯತ್ನ ಪ್ರಕರಣಗಳಲ್ಲಿ ಬೇಕಾಗಿದ್ದ ರೌಡಿ ಶೀಟರ್ ವೆಂಕಟರಾಜು, ಹತ್ತಕ್ಕೂ ಹೆಚ್ಚು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.


Spread the love

LEAVE A REPLY

Please enter your comment!
Please enter your name here