ವಚನ ಶ್ರಾವಣ ಪ್ರಾರಂಭೋತ್ಸವ ಇಂದು

0
Vachana Shravan initiation ceremony today
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಬಸವದಳ, ಬಸವಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘ ಗದಗ-ಬೆಟಗೇರಿ ಇವುಗಳ ಸಂಯುಕ್ತಾಶ್ರಯದಲ್ಲಿ ‘ವಚನ ಶ್ರಾವಣ’ವನ್ನು ಗದಗ-ಬೆಟಗೇರಿ ನಗರದ ಹಲವಾರು ಬಡಾವಣೆಗಳಲ್ಲಿ ನಡೆಯಲಿದ್ದು, ಬೆಟಗೇರಿ ಒಕ್ಕಲಗೇರಿ ಓಣಿಯ ಶ್ರೀ ಬ್ರಹ್ಮದೇವರ ಭಜನಾ ಮಂಡಳಿ (ದೈವದ ಮನೆ)ಯಲ್ಲಿ ರವಿವಾರ ಸಂಜೆ 5.30ಕ್ಕೆ ಉದ್ಘಾಟನೆಗೊಳ್ಳಲಿದೆ.

Advertisement

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸವದಳದ ಶರಣ ವಿ.ಕೆ. ಕರೇಗೌಡ್ರ ವಹಿಸುವರು. ಉದ್ಘಾಟಕರಾಗಿ ಶರಣ ಕೊಟ್ರಪ್ಪ ಎಂ.ಮುಳ್ಳಾಳ, ಅತಿಥಿಗಳಾಗಿ ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ, ಶರಣ ಶೇಖಣ್ಣ ಕಳಸಾಪೂರಶೆಟ್ರ ಮತ್ತು ಬಸವಕೇಂದ್ರದ ಅಧ್ಯಕ್ಷ ಶರಣ ಕೆ.ಎಸ್. ಚೆಟ್ಟಿ, ಶರಣ ಚಂದ್ರು ಕರಿಸೋಮನಗೌಡ್ರ ಆಗಮಿಸುವರು. ಇದೇ ಸಂದರ್ಭದಲ್ಲಿ ‘ವಚನ ಶ್ರಾವಣ-2024’ ಕಿರು ಹೊತ್ತಿಗೆಯನ್ನು ಬಿಡುಗಡೆಗೊಳಿಸಲಾಗುವುದು.

ವಚನ ಚಿಂತನೆಯನ್ನು ಕನ್ನಡ ಪ್ರಾಧ್ಯಾಪಕ ಪ್ರೊ. ಸಿದ್ಧಲಿಂಗೇಶ ಯು. ಸಜ್ಜನಶೆಟ್ಟರ ಮಾಡುವರು. ಬಸವದಳ, ಬಸವಕೇಂದ್ರ ಹಾಗೂ ಲಿಂಗಾಯತ ಪ್ರಗತಿಶೀಲ ಸಂಘ, ಗದಗ ತಾಲೂಕಾ ಶರಣ ಸಾಹಿತ್ಯ ಪರಿಷತ್ ಸದಸ್ಯರು, ಶರಣ ಸಾಹಿತ್ಯಾಭಿಮಾನಿಗಳು ಹಾಗೂ ಆಸಕ್ತರು ಭಾಗವಹಿಸಬೇಕೆಂದು ಸಂಘಟಿಕರ ಪರವಾಗಿ ಪ್ರಕಾಶ ಅಸುಂಡಿಯವರು ವಿನಂತಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here