ಬೆಂಗಳೂರಿನಲ್ಲಿ ವಿದೇಶಿ ಪ್ರಜೆಯ ಕೊಳೆತ ಶವ ಪತ್ತೆ: ಕೊಲೆಯೋ!?, ಆತ್ಮಹತ್ಯೆಯೋ!?

0
Spread the love

ಬೆಂಗಳೂರು:- ಕೊಳೆತ ಸ್ಥಿತಿಯಲ್ಲಿ ವಿದೇಶಿ ಪ್ರಜೆಯ ಶವ ಪತ್ತೆಯಾದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜರುಗಿದೆ. ಬೆಂಗಳೂರಿನ ಕೋರಮಂಗಲ 7ನೇ ಬ್ಲಾಕ್‌ಲ್ಲಿ ಜರುಗಿದೆ.

Advertisement

ಯುಕೆ ಮೂಲದ ಪ್ರಜೆ ಗೇವಿನ್ ಜೇಮ್ಸ್ ಯಂಗ್ (59) ಮೃತದೇಹ ಪತ್ತೆಯಾಗಿದ್ದು, ಇದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ. ಮೃತ ಜೇಮ್ಸ್‌ ಡೆತ್ ನೋಟ್ ಬರೆದಿಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಜುಲೈ 1ರಂದು ಬೆಂಗಳೂರಿಗೆ ಬಂದಿದ್ದ ಜೇಮ್ಸ್ ಯಂಗ್, ಆಪ್ ಮೂಲಕ ಕೋರಮಂಗಲದಲ್ಲಿ ಮನೆ ಬಾಡಿಗೆಗೆ ಪಡೆದಿದ್ದ. ಜನಾರ್ದನ್ ಎಂಬವರ ಮನೆಯಲ್ಲಿ ಬಾಡಿಗೆಗೆ ಇದ್ದ. ಶೆಫ್ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದ.

ಜೇಮ್ಸ್‌ ಹೆಂಡತಿಯಿಂದ ಡೈವೋರ್ಸ್‌ ಕೂಡ ಪಡೆದಿದ್ದು, ಖಿನ್ನತೆಗೊಳಗಾಗಿದ್ದ ಎನ್ನಲಾಗಿದೆ. ಅನಾರೋಗ್ಯದಿಂದ ಕೂಡ ಬಳಲುತ್ತಿದ್ದ ಜೇಮ್ಸ್‌ಗೆ ಬಿಪಿ, ಶುಗರ್ ಕೂಡ ಇತ್ತು. ಶುಗರ್ ಹಿನ್ನೆಲೆಯಲ್ಲಿ ಮಾತ್ರೆ ಹಾಗೂ ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದ. ಓವರ್ ಡೋಸ್ ಟ್ಯಾಬ್ಲೆಟ್ ಹಾಗೂ ಇನ್ಸುಲಿನ್ ತಗೆದುಕೊಂಡು ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಅನುಮಾನಿಸಲಾಗಿದೆ.

ಕಳೆದ ತಿಂಗಳ 27ರಂದು ಮನೆ ಓನರ್‌ಗೆ ಕರೆ ಮಾಡಿದ್ದ ಜೇಮ್ಸ್, ಆಗಸ್ಟ್ 1ರವರೆಗೂ ನನ್ನನ್ನು ಡಿಸ್ಟರ್ಬ್‌ ಮಾಡಬೇಡಿ ಎಂದು ಹೇಳಿದ್ದ. ಶನಿವಾರ ಮನೆ ಮಾಲೀಕ ಎಷ್ಟೇ ಕರೆ ಮಾಡಿದರೂ ಜೇಮ್ಸ್ ಸ್ವೀಕರಿಸಿರಲಿಲ್ಲ. ಹೀಗಾಗಿ ಅನುಮಾನಗೊಂಡು ಮನೆ ಬಳಿ ಹೋಗಿ ನೋಡಿದಾಗ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.


Spread the love

LEAVE A REPLY

Please enter your comment!
Please enter your name here