ಇಂಡೋನೇಷ್ಯಾದ ದಕ್ಷಿಣ ತಪನುಲಿ ಪ್ರಾಂತ್ಯದಲ್ಲಿ ಮದುವೆ ಯಾವಾಗ ಎಂದು ಪ್ರಶ್ನೆ ಕೇಳಿ, ತಮಾಷೆ ಮಾಡುತ್ತಿದ್ದ ನೆರೆಮನೆಯವನನ್ನು ವ್ಯಕ್ತಿಯೊಬ್ಬ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
45 ವರ್ಷ ವಯಸ್ಸಿನ ಸಿರ್ಗಾರ್ ಎಂಬವನು ಅಸಗಿಮ್ ಇರಿಯಾಂಟೊ ಎಂಬ 60 ವರ್ಷ ವಯಸ್ಸಿನ ನೆರೆಮನೆಯವನ ತಲೆಗೆ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಜುಲೈ 29 ರ ರಾತ್ರಿ ಸಿರ್ಗಾರ್ ದೊಣ್ಣೆಯಿಂದ ನೆರೆಯ ಮನೆಯವನಾದ ಅಸಗಿಮ್‌ನ ತಲೆಗೆ ಬಲವಾಗಿ ಹೊಡೆದು ಹತ್ಯೆ ಮಾಡಿದ್ದಾನೆ.
ವಯಸ್ಸಾಗುತ್ತಾ ಬಂತಲ್ವಾ ಯಾವಾಗ ಮದುವೆ ಎಂದು ಪದೇ ಪದೇ ಅಸಗಿಮ್ ನನ್ನನ್ನು ಪ್ರಶ್ನಿಸುತ್ತಿದ್ದನು ಜೊತೆಗೆ ತಮಾಷೆ ಮಾಡ್ತಿದ್ದ ಇದರಿಂದ ಕೋಪಗೊಂಡು ನಾನು ಆತನನ್ನು ಕೊಲ್ಲುವ ನಿರ್ಧಾರ ಮಾಡಿದೆ ಎಂದು ಸಿರ್ಗಾರ್ ಪೊಲೀಸ್ ವಿಚಾರಣೆಯ ವೇಳೆ ಹೇಳಿಕೊಂಡಿದ್ದಾರೆ. ಈ ಆಘಾತಕಾರಿ ಘಟನೆ ಇಂಡೋನೇಷ್ಯಾದಾದ್ಯಂತ ತಲ್ಲಣ ಮೂಡಿಸಿದ್ದು, ಅಲ್ಲಾ ಒಂದು ಸಣ್ಣ ಮಾತು ಕೂಡಾ ಕೊಲೆಗೆ ಕಾರಣವಾಗುತ್ತಾ ಎಂದು ನೆಟ್ಟಿಗರು ಈ ಸುದ್ದಿಯನ್ನು ಕೇಳಿ ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ಅಲ್ಲದೇ ಎಂಥಾ ಕಾಲ ಬಂತು ಗುರು ಎನ್ನುವಂತಾಗಿದೆ.