ವಿಜಯಸಾಕ್ಷಿ ಸುದ್ದಿ, ಗದಗ : ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕಣವಿಯ ಶ್ರೀ ಮ.ಫ. ಆಲೂರ ಹಾಗೂ ಶ್ರೀಮತಿ ಪಾ.ನಿಂ. ದೊಡ್ಡಗೌಡರ ಸರಕಾರಿ ಪ್ರೌಢಶಾಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಣವಿಯಲ್ಲಿ `ನಮ್ಮ ನಡೆ ಗ್ರಾಮಗಳ ಕಡೆ’ ಕಾರ್ಯಕ್ರಮದಡಿ `ಕನ್ನಡ ಸಾಹಿತ್ಯದಲ್ಲಿ ಅಲ್ಲಮಪ್ರಭುಗಳು’ ವಿಷಯದ ಕುರಿತು ಪ್ರೊ. ಜಯಶ್ರೀ ಅಂಗಡಿ ಅವರು ಉಪನ್ಯಾಸ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಗದಗ ತಾಲೂಕಾ ಕಸಾಪ ಅಧ್ಯಕ್ಷೆ ಡಾ. ರಶ್ಮಿ ಅಂಗಡಿ ಮಾತನಾಡಿ, ಈ ಕಾರ್ಯಕ್ರಮದಿಂದ ಗ್ರಾಮೀಣ ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ದೊರಕುತ್ತಿದೆ. ಇಂದು ಇಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ತಮ್ಮ ಪ್ರೌಢಿಮೆಯ ಮೂಲಕ ಗಮನ ಸೆಳೆದಿದ್ದು, ಸಾಹಿತ್ಯದ ಹಿನ್ನೆಲೆಯಲ್ಲಿ ಅವರು ಬೆಳೆಯುವಂತಾಗಲಿ ಎಂದು ಆಶಿಸಿದರು.
ಸಂಸ್ಕೃತ ವಿದ್ವಾಂಸರಾದ ಗಣಪತಿ ಗಾಂವ್ಕರ, ಶಾಲೆಯ ಮುಖ್ಯೋಪಾಧ್ಯಯ ಎಸ್.ಆಯ್. ಬಡಿಗೇರ್ ಮಾತನಾಡಿದರು. ವೇದಿಕೆಯಲ್ಲಿ ಎಸ್‌ಡಿಎಮ್‌ಸಿ ಅಧ್ಯಕ್ಷ ಮಂಜುನಾಥ ಕೋರಿ ಇದ್ದರು. ಎಸ್.ಜೆ. ಮೂಲಿಮನಿ ಸ್ವಾಗತಿಸಿದರು. ಶಿಕ್ಷಕಿ ಆರ್.ವಾಯ್. ಶಿವಬಸಣ್ಣವರ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸ ನೀಡಿದ ಪ್ರೊ. ಜಯಶ್ರೀ ಅಂಗಡಿಯವರನ್ನು ಮತ್ತು ಮುಖ್ಯೋಪಾಧ್ಯಾಯರಾದ ಎಸ್.ಆಯ್. ಬಡಿಗೇರ ಅವರನ್ನು ಸಾಹಿತ್ಯ ಪರಿಷತ್ತಿನ ಪರವಾಗಿ ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳಾದ ಸುಮೇಧಾ ಕಳ್ಳಿಮನಿ, ರಾಧಿಕಾ ಬೋಳನವರ್, ಅಭಿಷೇಕ್ ಸಾಳೆ, ಪೂಜಾ ಬಾರಿಕಾಯಿ ಅಲ್ಲಮಪ್ರಭುಗಳನ್ನು ಕುರಿತು ಭಾಷಣ ಮತ್ತು ಹಾಡುಗಳನ್ನು ಪ್ರಸ್ತುತಪಡಿಸಿದರು. ಎಸ್.ಎಮ್. ಬಿಳೇಬಾಳಿ, ಜಿ.ಎಸ್. ಮುದ್ದಿಕೋಲ, ಎಮ್.ಎಸ್. ಗಾರವಾಡ, ನಾಗನಗೌಡ ಮೇಟಿ, ಆರ್.ಬಿ. ನೀಲಾಂಬಿಕಾ, ಎಸ್.ಡಿ. ರೂಢಿಗಿ, ಜೆ.ಸಿ. ಅಬ್ಬಗೇರಿ, ಸುರೇಶ ಬಳಗಾರ ಸೇರಿದಂತೆ ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಜರಿದ್ದರು. ಕಸಾಪ ಕಾರ್ಯದರ್ಶಿ ವಿಶ್ವನಾಥ ಬೇಂದ್ರೆ ವಂದಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಳಕಪ್ಪ ಕುರ್ತಕೋಟಿ, ಅಲ್ಲಮಪ್ರಭುಗಳು ಕಣವಿಗೆ ಬಂದು ಅನುಷ್ಠಾಗೈದ ಸ್ಥಳಗಳ ಕುರಿತು ಮಾಹಿತಿ ನೀಡುತ್ತ, ಅಂತಹ ಮಹಾತ್ಮರು ನಡೆದಾಡಿದ ಈ ಭೂಮಿಯಲ್ಲಿ ನಾವು ಜನಿಸಿರುವುದು ಪುಣ್ಯವಾಗಿದೆ ಎಂದರು.



