HomeGadag Newsಶಾಲಾ ದಾಖಲಾತಿ ಹೆಚ್ಚಿಸಲು ಪ್ರಯತ್ನಿಸಿ : ಮಿಥುನ್ ಪಾಟೀಲ

ಶಾಲಾ ದಾಖಲಾತಿ ಹೆಚ್ಚಿಸಲು ಪ್ರಯತ್ನಿಸಿ : ಮಿಥುನ್ ಪಾಟೀಲ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ : ಸರಕಾರಿ ಶಾಲೆಯಲ್ಲಿನ ಎಲ್ಲ ಮಕ್ಕಳಿಗೆ ಸರಕಾರ ಮಧ್ಯಾಹ್ನದ ಬಿಸಿಯೂಟವನ್ನು ನೀಡುತ್ತಿದೆ. ಇದರೊಂದಿಗೆ ಈ ಶಾಲೆಯ ಶಿಕ್ಷಕರ ಮುತುವರ್ಜಿಯಿಂದ ಪ್ರತಿ ವರ್ಷದ ಶ್ರಾವಣ ಮಾಸದಲ್ಲಿ ಅಮೃತ ಭೋಜನ ಎಂಬ ಹೊಸ ಪರಿಕಲ್ಪನೆಯನ್ನು ಹುಟ್ಟು ಹಾಕಿ ಕಳೆದ ಮೂರು ವರ್ಷಗಳಿಂದ ಅದನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಒಂದು ತಿಂಗಳು ಪೂರ್ತಿ ನಡೆಯುವ ಈ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಯುವ ಧುರೀಣ ಮಿಥುನ್ ಜಿ.ಪಾಟೀಲ ಹಾರೈಸಿದರು.

ಪಟ್ಟಣದ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯಲ್ಲಿ ಶ್ರಾವಣ ಪ್ರಾರಂಭದ ದಿನದಂದು ಅಮೃತ ಭೋಜನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸರಕಾರಿ ಶಾಲೆಗಳಲ್ಲಿ ಹಾಜರಾತಿ ಕಡಿಮೆಯಾಗುತ್ತಿದೆ ಎನ್ನುವ ಕೂಗು ಕೇಳಿ ಬರುತ್ತಿದೆ. ಆದರೆ ಅಲ್ಲಿನ ಶಿಕ್ಷಕರು ಇಂತಹ ವಿಶೇಷ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವ ಮೂಲಕ ಶಾಲಾ ದಾಖಲಾತಿಯನ್ನು ಉತ್ತಮಪಡಿಸಲು ಪ್ರಯತ್ನಿಸಬೇಕು. ಇಲ್ಲಿನ ವಿದ್ಯಾರ್ಥಿಗಳ ಸಂಖ್ಯೆಯನ್ನು ಕಂಡು ನನಗೆ ಸಂತಸವಾಗಿದೆ. ಅದಕ್ಕಾಗಿ ಇಲ್ಲಿನ ಶಿಕ್ಷಕ ಬಳಗದ ಶ್ರಮ ಕಾರಣ ಎಂದು ಪಾಟೀಲ ಹೇಳಿದರು.

ಶಾಲೆಯ 8 ಕೋಣೆಗಳು ದುರಸ್ತಿಗೆ ಕಾದಿವೆ ಎಂದು ಹೇಳಿದರು. ಈ ಸಮಸ್ಯೆಯನ್ನು ಶಾಸಕ ಜಿ.ಎಸ್. ಪಾಟೀಲರ ಗಮನಕ್ಕೆ ತಂದು ಅವುಗಳಿಗೆ ಶೀಘ್ರ ಕಾಯಕಲ್ಪ ನೀಡಲಾಗುವುದೆಂದು ತಿಳಿಸಿದ ಅವರು, ಶಾಲೆಯಲ್ಲಿ ಇನ್ನೇನಾದರೂ ಅನಾನುಕೂಲಗಳಿದ್ದರೆ ತಮ್ಮ ಗಮನಕ್ಕೆ ತನ್ನಿ. ಗ್ರಾಮದ ಶಾಲೆ ಅಭಿವೃದ್ಧಿ ಕಾಣಲು ಸಮುದಾಯದ ಸಹಭಾಗಿತ್ವವೂ ಮುಖ್ಯ ಕಾರಣವಾಗುತ್ತದೆ ಎಂದು ಹೇಳಿದರು.

ಶಾಲಾ ಸುಧಾರಣಾ ಸಮಿತಿಯ ಅಧ್ಯಕ್ಷ ಆನಂದ ಕೊಟಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸದಸ್ಯರಾದ ಪೋತರಾಜ ಮಣ್ಣೊಡ್ಡರ, ಅಬ್ದುಲಗಣಿ ಕುದರಿ, ದೀಪಾ ಬಸವರಾಜ ಈಟಿ ಉಪಸ್ಥಿತರಿದ್ದರು. ವೇದಿಕೆಯ ಮೇಲೆ ಪ.ಪಂ. ಸದಸ್ಯರಾದ ರಾಚಯ್ಯ ಮಾಲಗಿತ್ತಿಮಠ, ಮುತ್ತಪ್ಪ ನೂಲ್ಕಿ, ಶಹರ ಘಟಕದ ಅಧ್ಯಕ್ಷ ಶಿವನಗೌಡ ಪಾಟೀಲ, ಅಲ್ಲಾಭಕ್ಷಿ ನದಾಫ್, ಶೇಕಪ್ಪ ಕೆಂಗಾರ, ಎಸ್.ಟಿ. ಘಟಕದ ಅಧ್ಯಕ್ಷ ಶೇಕಪ್ಪ ಜುಟ್ಲ, ನಿಂಗನಗೌಡ ಲಕ್ಕನಗೌಡ್ರ, ಕಳಕನಗೌಡ ಪೊಲೀಸ್‌ಪಾಟೀಲ, ಮೈಲಾರಪ್ಪ ಚಳ್ಳಮರದ, ಕರವೇ ಜಿಲ್ಲಾಧ್ಯಕ್ಷ ಹನುಮಂತಪ್ಪ ಅಬ್ಬಿಗೇರಿ, ಸಂತೋಷ ಮಣ್ಣೊಡ್ಡರ, ಪ್ರಕಾಶ ಪಾದಗಟ್ಟಿ, ಎ.ಎ. ನವಲಗುಂದ, ಆನಂದ ಹಾಳಕೇರಿ, ಬಸವರಾಜ ಹತ್ತಿಕಟಗಿ, ಹಟೇಲ್‌ಸಾಬ ಲತೀಫಸಾಬನವರ ಮುಂತಾದವರಿದ್ದರು.

ಸಮಾರಂಭದಲ್ಲಿ ಅಮೃತ ಭೋಜನದ ದಾನಿ ಮಿಥುನ್ ಜಿ.ಪಾಟೀಲ ಮತ್ತು ನರೇಗಲ್ಲ ಹೋಬಳಿ ಘಟಕದ ಪತ್ರಕರ್ತರ ಸಂಘದ ಅಧ್ಯಕ್ಷ ಆದರ್ಶ ಕುಲಕರ್ಣಿಯವರನ್ನು ಸನ್ಮಾನಿಸಲಾಯಿತು. ಶಿಕ್ಷಕಿ ಎನ್.ಎಲ್. ಚವ್ಹಾಣ ನಿರೂಪಿಸಿದರು. ಶಿಕ್ಷಕ ಜೆ.ಎ. ಪಾಟೀಲ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಬಿಬಿ. ಕುರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ. ಎಸ್. ಮಾಳಶೆಟ್ಟಿ ವಂದಿಸಿದರು.

ನಿವೃತ್ತ ಶಿಕ್ಷಕ ಎಂ.ಎಸ್. ದಢೇಸೂರಮಠ ಮಾತನಾಡಿ, ಸರಕಾರದ ಯೋಜನೆಗಳನ್ನು ವಿದ್ಯಾರ್ಥಿಗಳು ಮತ್ತು ಪಾಲಕರು ಸದುಪಯೋಗಪಡಿಸಿಕೊಳ್ಳಬೇಕು. ಜೀವನದಲ್ಲಿ ಯಶಸ್ಸು ಕಾಣಬೇಕೆಂದರೆ ಅದಕ್ಕೆ ಶಿಕ್ಷಣವೇ ತಳಹದಿ. ಈ ಶಾಲೆಯಲ್ಲಿ ಎಲ್ಲ ಯೋಜನೆಗಳ ಜೊತೆಗೆ ಉತ್ತಮ ಗುಣಮಟ್ಟದ ಶಿಕ್ಷಣ ನಿಮಗೆ ಸಿಗುತ್ತದೆ. ತಾವು ಇಲ್ಲಿ ವೃತ್ತಿಯಲ್ಲಿದ್ದಾಗ 8 ಕೋಣೆಗಳು ದುರಸ್ತಿಗೆ ಬಂದಿರುವದನ್ನು ತಿಳಿಸಿ, ಬೇಗನೆ ಅವುಗಳಿಗೆ ಪರಿಹಾರ ಸಿಗುವಂತೆ ಮಾಡಲು ಶಾಸಕರಿಗೆ ಶಿಫಾರಸು ಮಾಡಬೇಕೆಂದು ಮಿಥುನ್ ಅವರನ್ನು ವಿನಂತಿಸಿದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!