ಚಿತ್ರದುರ್ಗ:- ಜಿಲ್ಲೆಯ ಹೊಸದುರ್ಗದ ಖಾಸಗಿ ಲಾಡ್ಜ್ನಲ್ಲಿ ಡೆತ್ನೋಟ್ ಬರೆದಿಟ್ಟು ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.
40 ವರ್ಷದ ಎಂ.ಸಂತೋಷ್ ಖಾಸಗಿ ಲಾಡ್ಜ್ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಐಡಿಎಫ್ಸಿ ಬ್ಯಾಂಕ್ ಉದ್ಯೋಗಿ ಆಗಿದ್ದ ಸಂತೋಷ್ ಅವರಿಗೆ ಕೆಲ ದಿನಗಳ ಹಿಂದೆ ಮಧ್ಯಪ್ರದೇಶಕ್ಕೆ ವರ್ಗಾವಣೆ ಮಾಡಲಾಗಿತ್ತು. ಆದರೆ ಅನಾರೋಗ್ಯ ಕಾರಣ ಸಂತೋಷ್ ಅವರು ಕರ್ನಾಟಕದಲ್ಲೇ ಇರಲು ಬಯಸಿದ್ದರು. ಹೀಗಾಗಿ ಐಡಿಎಫ್ಸಿ ಬ್ಯಾಂಕ್ ಮುಖ್ಯಸ್ಥರು 2 ದಿನಕ್ಕಾಗಿ ಹೊಸದುರ್ಗದಲ್ಲಿರಲು ಕಳಿಸಿದ್ದರು. ಸಂತೋಷ್ ಅವರು ಹೊಸದುರ್ಗದ ಐಡಿಎಫ್ಸಿ ಬ್ಯಾಂಕ್ ಕಟ್ಟಡದ ಮೇಲ್ಭಾಗದಲ್ಲಿನ ಲಾಡ್ಜ್ನಲ್ಲೇ ಪ್ರಾಣಬಿಟ್ಟಿದ್ದಾರೆ.
ಬ್ಯಾಂಕ್ ಮೇಲಾಧಿಕಾರಿಗಳ ಕಿರುಕುಳದಿಂದ ಆತ್ಮಹತ್ಯೆ ಎಂದು ಸಂತೋಷ್ ಅವರು ತಮ್ಮ ಡೆತ್ ನೋಟ್ನಲ್ಲಿ ಬರೆದಿದ್ದಾರೆ. ಐಡಿಎಂಫ್ಸಿ ಬ್ಯಾಂಕ್ ನನ್ನ ಸಾವಿಗೆ ಪರಿಹಾರ ನೀಡಬೇಕೆಂದು ಬರೆದಿದ್ದಾರೆ. ಅಲ್ಲದೆ ಲಂಚ ನೀಡಿದರೆ ಮಾತ್ರ ಐಡಿಎಫ್ಸಿಯಲ್ಲಿ ಕೆಲಸ ಆಗುತ್ತದೆಂದು ಆರೋಪಿಸಿದ್ದಾರೆ.