ಮಹಿಳೆ ಮೇಲೆ ನರಿ ದಾಳಿ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ತಾಲೂಕಿನ ಅಕ್ಕಿಗುಂದ ತಾಂಡಾದ ನಾಗಮ್ಮ ರಾಮಚಂದ್ರ ಲಮಾಣಿ (50) ಎಂಬ ಮಹಿಳೆಯ ಮೇಲೆ ಮಂಗಳವಾರ ನಸುಕಿನ ಜಾವ ನರಿ ದಾಳಿ ಮಾಡಿ ಕಾಲಿಗೆ ಕಚ್ಚಿ ಗಾಯಗೊಳಿಸಿದ ಘಟನೆ ನಡೆದಿದೆ.

Advertisement

ತಾಂಡಾದ ಅವರ ಮನೆ ಹತ್ತಿರ ಕೈ-ಕಾಲು ತೊಳೆದುಕೊಳ್ಳುವಾಗ ನರಿ ದಾಳಿ ಮಾಡಿದೆ. ಗಾಯಗೊಂಡ ಮಹಿಳೆಯನ್ನು ಸೂಕ್ತ ಚಿಕಿತ್ಸೆಗಾಗಿ ಪಟ್ಟಣದ ಸರಕಾರಿ ಸಮುದಾಯದ ಅರೋಗ್ಯ ಕೇಂದ್ರದಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾಳೆ.

ಸೋಮವಾರ ರಾತ್ರಿಯ ವೇಳೆ ಇದೇ ನರಿಯು ತಾಂಡಾದಲ್ಲಿನ 3-4 ಆಕಳುಗಳಿಗೂ ಕಚ್ಚಿದೆ. ಮಂಗಳವಾರ ನಸುಕಿನಲ್ಲಿ ಮಹಿಳೆಯನ್ನು ಕಚ್ಚಿ ಗಾಯಗೊಳಿಸಿದ್ದರಿಂದ ಭಯಭೀತರಾದ ಸ್ಥಳೀಯ ನಿವಾಸಿಗಳ ಅಕ್ರೋಶಕ್ಕೆ ನರಿ ಬಲಿಯಾಗಿದೆ ಎನ್ನಲಾಗಿದೆ.


Spread the love

LEAVE A REPLY

Please enter your comment!
Please enter your name here