ದಾವಣಗೆರೆ: ಸೆ.11ಕ್ಕೆ ಬೆಳಗಾವಿಯಲ್ಲಿ ರಾಜ್ಯಮಟ್ಟದ ಹಕ್ಕೊತ್ತಾಯ ಸಮಾವೇಶ ಮಾಡಿ, ಮಲಗಿರುವ ಸರ್ಕಾರದ ಕಣ್ಣು ತೆರೆಸುವ ಕೆಲಸ ಮಾಡುತ್ತೇವೆ ಎಂದು ಕೂಡಲಸಂಗಮ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕಾನೂನು ತಜ್ಞರ ಸಭೆ ಕರೆದಿದ್ದೇವೆ. ಸೆ.11ಕ್ಕೆ ಬೆಳಗಾವಿಯಲ್ಲಿ ರಾಜ್ಯಮಟ್ಟದ ಹಕ್ಕೊತ್ತಾಯ ಸಮಾವೇಶ ಮಾಡಿ, ಮಲಗಿರುವ ಸರ್ಕಾರದ ಕಣ್ಣು ತೆರೆಸುವ ಕೆಲಸ ಮಾಡುತ್ತೇವೆ ಎಂದರು.
Advertisement
ಲಿಂಗಾಯತರು ಹಿಂದೂಗಳು, ಹಿಂದೂ ಧರ್ಮದ ರೆಂಬೆಕೊಂಬೆಗಳು ಎಂಬ ಹರಿಹರ ಪಂಚಮಸಾಲಿ ಸ್ವಾಮೀಜಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾವು ಭಾಷೆಯಿಂದ ಕನ್ನಡಿಗರು, ರಾಷ್ಟ್ರೀಯತೆಯಿಂದ ಭಾರತೀಯರು, ಭೌಗೋಳಿಕವಾಗಿ ಹಿಂದೂಸ್ಥಾನದವರು, ಧಾರ್ಮಿಕವಾಗಿ ಲಿಂಗಾಯತರು, ಜನಾಂಗದಿಂದ ನಾವು ಪಂಚಮಸಾಲಿಗಳು, ಇದು ನನ್ನ ಘೋಷಣೆ ಎಂದು ತಿಳಿಸಿದರು.