ದಾಸರಹಳ್ಳಿ: ಶಾಲೆಯ ಕಿಟಕಿ ಗಾಜು ಹೊಡೆದು ತಡರಾತ್ರಿ ಕಿಡಿಗೇಡಿಗಳು ದಾಂದಲೆ ನಡೆಸಿರುವ ಘಟನೆ ಟಿ.ದಾಸರಹಳ್ಳಿಯ ರವೀಂದ್ರನಗರದಲ್ಲಿ ಜರುಗಿದೆ.
Advertisement
ನೂತನವಾಗಿ ಕಟ್ಟಿರುವ ಟಿ.ದಾಸರಹಳ್ಳಿಯ ರವೀಂದ್ರನಗರದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ತಡರಾತ್ರಿಯಲ್ಲಿ ಬಂದ ಕಿಡಿಗೇಡಿಗಳು, ಕಿಟಕಿ ಗಾಜು ಹೊಡೆದು ಎಸ್ಕೇಪ್ ಆಗಿದ್ದಾರೆ. ಇನ್ನೂ ಘಟನಾ ಸ್ಥಳಕ್ಕೆ ಶಾಸಕ ಎಸ್. ಮುನಿರಾಜು ಭೇಟಿ ನೀಡಿ ಪರಿಶೀಲಿಸಿದರು.
ಇನ್ನೂ ಕಿಡಿಕಿ ಗಾಜು ಹೊಡೆದಿರುವ ಪುಂಡರ ವಿರುದ್ಧ ಆಕ್ರೋಶ ಭುಗಿಲೆದ್ದಿದ್ದು, ಕೂಡಲೇ ಪುಂಡರ ವಿರುದ್ಧ ಕ್ರಮ ಕೈಗೊಳ್ಳಲು ಸಾರ್ವಜನಿಕರು ಸೂಚನೆ ನೀಡಿದ್ದಾರೆ.
ಬಾಗಲಗುಂಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.