ಗ್ರಾಮ ಪಂಚಾಯಿತಿಗಳಿಗೆ ‘ಲೋಕ’ ಭೇಟಿ: ಸಿಬ್ಬಂದಿಗಳಿಗೆ ಬಿಸಿ ಮುಟ್ಟಿಸಿದ ಅಧಿಕಾರಿಗಳು

0
Spread the love

ಉಪ ಲೋಕಾಯುಕ್ತ ನ್ಯಾ.ಬಿ‌.ವೀರಪ್ಪ ನೇತೃತ್ವದಲ್ಲಿ  ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂ.ಗ್ರಾಮಾಂತರ ಜಿಲ್ಲೆಯ ಅಣ್ಣೇಶ್ವರ, ಜಾಲಿಗೆ, ದೊಡ್ಡತುಮಕೂರು, ಮಜರಾ ಹೊಸಹಳ್ಳಿ, ಬೂದಿಹಾಳ, ಸೋಂಪುರ, ನಂದಗುಡಿ, ಸೂಲಿಬೆಲೆ ಪಂಚಾಯತಿಗಳ ಮೇಲೆ ಲೋಕಾ ದಾಳಿ ನಡೆಸಿ,

Advertisement

ಇ-ಖಾತಾ. ಟ್ಯಾಕ್ಸ್ ಕಲೆಕ್ಷನ್ ಲೆಡ್ಜರ್ ಸೇರಿದಂತೆ ಹಲವು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಇನ್ನು ಬೆಂಗಳೂರು ನಗರ ಜಿಲ್ಲೆಯ ಕಸಘಟ್ಟಪುರ, ರಾಜಾನುಕುಂಟೆ, ಬನ್ನೇರುಘಟ್ಟ, ಕಲ್ಲುಬಾಳು, ಕಣ್ಣೂರು, ಮಂಡೂರು, ಕುಂಬಳಗೋಡು, ಆಗರ, ದಾಸನಪುರ ಮತ್ತು ಅಡಕಮಾರನಹಳ್ಳಿ ಗ್ರಾ.ಪಂ. ಕಚೇರಿ ಮೇಲೆ ದಾಳಿ ನಡೆಸಿ ಅಧಿಕಾರಿಗಳಿಂದ ಪಂಚಾಯತಿಗಳಲ್ಲಿನ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.


Spread the love

LEAVE A REPLY

Please enter your comment!
Please enter your name here