ಬಸವ ಕಲ್ಯಾಣದಲ್ಲಿ ಗೆಲ್ಲದಿದ್ದರೆ ಬಿಜೆಪಿ ಬಿದ್ದು ಹೋಗಲ್ಲ: ಬಿ.ಸಿ. ಪಾಟೀಲ

0
Spread the love

ವಿಜಯಸಾಕ್ಷಿ ಸುದ್ದಿ ಕೊಪ್ಪಳ
ಬಸವಕಲ್ಯಾಣದಲ್ಲಿ ಗೆಲ್ಲದಿದ್ರೆ ಬಿಜೆಪಿ ಬಿದ್ದು ಹೋಗಲ್ಲ. ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಜನರು ಬಿಜೆಪಿ ಗೆಲ್ಲಿಸುತ್ತಾರೆ ಎಂದು ಕೃಷಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಹೇಳಿದರು.
ಕೊಪ್ಪಳದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಓಲೈಕೆಗಾಗಿ ವಿವಿಧ ಸಮುದಾಯಗಳ ಪ್ರಾಧಿಕಾರ ಘೋಷಣೆ ಮಾಡಿಲ್ಲ. ಆಯಾ ಸಮುದಾಯಗಳ ಬೇಡಿಕೆಗೆ ಅನುಗುಣವಾಗಿ ಪ್ರಾಧಿಕಾರ ರಚಿಸಲಾಗ್ತಾ ಬಂದಿದೆ. ಮರಾಠಾ ಅಭಿವೃದ್ಧಿ ಪ್ರಾಧಿಕಾರದಿಂದ ಮರಾಠವನ್ನು ಉದ್ಧಾರ ಮಾಡೋದಲ್ಲ, ಮರಾಠಿ ಕನ್ನಡಿಗರ ಪ್ರಗತಿಗಾಗಿ ಪ್ರಾಧಿಕಾರ ರಚಿಸಲಾಗಿದೆ ಎಂದರು.
ಶಿರಾ, ಆರ್‌ಆರ್ ನಗರ ಚುನಾವಣೆಯನ್ನೇ ಗೆದ್ದಿದ್ದೇವೆ, ಬಸವ ಕಲ್ಯಾಣ ಗೆಲ್ಲಲ್ವಾ? ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ಜಯ ಖಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಸಚಿವ ಸಂಪುಟಕ್ಕೆ ಹೊಸಬರ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹೊಸಬರಿಗೆ ಸಚಿವ ಸ್ಥಾನ ನೀಡೋದು ಸಿಎಂ ಅವರ ಪರಮಾಧಿಕಾರ. ಕೊಪ್ಪಳ ಜಿಲ್ಲೆಯ ಬಿಜೆಪಿ ಶಾಸಕರು ಸಚಿವ ಸ್ಥಾನ ಕೇಳಿದ್ರೆ ತಪ್ಪೇನಿದೆ? ಎಂದು ಪ್ರಶ್ನಿಸಿದರು.

Advertisement

Spread the love

LEAVE A REPLY

Please enter your comment!
Please enter your name here