ಉಡುಪಿ:- ಕಲ್ಲ ನಾಗರ ಕಂಡರೆ ಹಾಲೆರೆವರಯ್ಯ, ನಿಜ ನಾಗರ ಕಂಡರೆ ಭಯ ಪಡುವರಯ್ಯ ಎನ್ನುವ ನುಡಿ ಉಡುಪಿಯಲ್ಲಿ ಸಾಂದರ್ಭಿಕವಾಗಿ ಸುಳ್ಳಾಗಿದೆ. ಇಲ್ಲಿ ನಾಗರ ಪಂಚಮಿ ಹಿನ್ನೆಲೆಯಲ್ಲಿ ಜೀವಂತ ಹಾವಿಗೆ ಹಾಲೆರೆದು ಪೂಜೆ ಸಲ್ಲಿಸಿ ಆಚರಣೆ ಮಾಡಲಾಗಿದೆ.
ಹೌದು, ಉಡುಪಿಯಲ್ಲಿ ಜೀವಂತ ನಾಗರ ಹಾವಿಗೆ ಪೂಜೆ ಸಲ್ಲಿಸುವ ಮೂಲಕ ನಾಗ ಪಂಚಮಿಯನ್ನು ವಿಶೇಷವಾಗಿ ಆಚರಣೆ ಮಾಡಲಾಗಿದೆ.
ಐತಾಳರು ಕಳೆದ 40 ವರ್ಷಗಳಿಂದಲೂ ಉರಗ ರಕ್ಷಣೆಯ ಕಾರ್ಯ ಮಾಡುತ್ತಿದ್ದಾರೆ. ಹಾಗೆ ನೋಡಿದರೆ ಪ್ರತಿನಿತ್ಯ ಅವರು ಜೀವಂತ ಹಾವುಗಳಿಗೆ ಪೂಜೆ ಮಾಡುತ್ತಾ ಬಂದಿದ್ದಾರೆ. ಗಾಯಗೊಂಡ ಹಾವು, ಆಶ್ರಯ ಇಲ್ಲದ ಹಾವು, ಬೇರ್ಪಟ್ಟ ಹಾವಿನ ಮರಿಗಳು, ಅಪಘಾತದಲ್ಲಿ ಗಾಯಗೊಂಡ ಹಾವು. ಹೀಗೆ ಎಲ್ಲೇ ಹಾವುಗಳು ಕಂಡರೂ ಅವರು ತಮ್ಮ ಮನೆಗೆ ತಂದು ಅದರ ಆರೈಕೆ ಮಾಡುತ್ತಾರೆ.
ಕಳೆದ 40 ವರ್ಷಗಳಿಂದ ಅವರು ಇದೇ ಕಾಯಕ ಮಾಡುತ್ತಿದ್ದಾರೆ. ಹಾಗಾಗಿ ಅವರ ಮನೆಯಲ್ಲಿ ಹಾವಿಗೆ ನಿತ್ಯವೂ ಪೂಜೆ ನಡೆಯುತ್ತಿರುತ್ತದೆ. ಇವತ್ತು ನಾಗರಪಂಚಮಿಯ ಪ್ರಯುಕ್ತ ವಿಶೇಷ ರೀತಿಯಲ್ಲಿ ನಾಗರಾಧನೆ ಮಾಡಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ಅದೇನೇ ಆಗಲಿ ಹಾವು ಅಂದಾಕ್ಷಣ ಸಾಮಾನ್ಯವಾಗಿ ಭಯ ಬೀಳೋದು ಗ್ಯಾರಂಟಿ. ಆದರೆ ನಿಜವಾದ ಹಾವಿಗೆ ಪೂಜೆ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ.



