ಕೊಪ್ಪಳ: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ನಲ್ಲಿ ಚೈನ್ ಕಟ್ ಆಗಿರುವುದಕ್ಕೆ ರಾಜ್ಯ ಸರಕಾರದ ನಿರ್ಲಕ್ಷ್ಯವೇ ಕಾರಣ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಟೀಕಿಸಿದರು. ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
Advertisement
ತುಂಗಭದ್ರಾ ಜಲಾಶಯದ 19 ನೇ ಗೇಟ್ ಎನ್ನುವುದಕ್ಕೆ ಅಲ್ಲಿ ಅಡ್ರೆಸ್ ಉಳಿದಿಲ್ಲ. ರಾಜ್ಯದಲ್ಲಿ ಆಡಳಿತದ ಹಳಿ ತಪ್ಪಿದೆ. ಜಲಾಶಯವನ್ನು 10 ಲಕ್ಷ ಎಕರೆ ಭೂಮಿಯ ರೈತರು ನಂಬಿಕೊಂಡಿದ್ದಾರೆ. ಇದರಿಂದ ರೈತರಿಗೆ ಬಹಳ ಆಘಾತ ಉಂಟು ಮಾಡಿದೆ. ಸರ್ಕಾರ ಕೂಡಲೇ ಕ್ರಮಕ್ಕೆ ಮುಂದಾಗಬೇಕಿದೆ’ ಎಂದು ಆಗ್ರಹಿಸಿದರು.