ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಮಡಿಲು ಸೇರಿ ಬರೋಬ್ಬರಿ 50 ದಿನಗಳಾಯ್ತು. ಸದ್ಯಕ್ಕೆ ಆರೋಪಿಗಳು ಹೊರಗೆ ಬರೋ ಯಾವ ಲಕ್ಷಣಗಳೂ ಕಾಣ್ತಿಲ್ಲ.ಇದರ ನಡುವೆ ದರ್ಶನ್‌ರನ್ನು ನೋಡಲು ಪತ್ನಿ ವಿಜಯಲಕ್ಷ್ಮಿ ಮತ್ತೆ ಜೈಲಿಗೆ ಭೇಟಿ ನೀಡಿದ್ದಾರೆ. ಪರಪ್ಪನ ಅಗ್ರಹಾರದಲ್ಲಿರುವ ದರ್ಶನ್ ನೋಡಲು 7ನೇ ಬಾರಿ ಪತ್ನಿ ವಿಜಯಲಕ್ಷ್ಮಿ ಜೈಲಿಗೆ ಭೇಟಿ ನೀಡಿದ್ದು,
ಅವರ ಜೊತೆ ನಟನ ಅಕ್ಕನ ಮಗ ಚಂದನ್ ಮತ್ತು ನಟಿ ಕಮ್ ನಿರ್ಮಾಪಕಿ ಶ್ರುತಿ ನಾಯ್ಡು ಕೂಡ ಆಗಮಿಸಿದ್ದಾರೆ. ಕಳೆದ ವಾರ ವಿಜಯಲಕ್ಷ್ಮಿ ಅವರು ಬನಶಂಕರಿ ದೇವಿಯ ಪ್ರಸಾದದೊಂದಿಗೆ ಪತಿಯನ್ನು ನೋಡಲು ಜೈಲಿಗೆ ಭೇಟಿ ನೀಡಿದ್ದರು. ಇನ್ನೂ ಜೈಲು ನಿಯಮಗಳ ಪ್ರಕಾರ, ಒಂದು ವಾರದಲ್ಲಿ 2 ಬಾರಿಯಷ್ಟೇ ಭೇಟಿಯಾಗಲು ಅವಕಾಶವಿರುತ್ತದೆ.



