ವಿಶ್ವ ಸ್ತನ್ಯಪಾನ ಜಾಗೃತಿ ಸಪ್ತಾಹ

0
World Breastfeeding Awareness Week
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಇನ್ನರ್‌ವೀಲ್ ಸಂಸ್ಥೆಯು ಲಕ್ಷ್ಮೇಶ್ವರದ ಪ್ರಾಥಮಿಕ ಆರೋಗ್ಯ ಸಮುದಾಯ ಕೇಂದ್ರದ ಸಹಕಾರದೊಂದಿಗೆ ಸೋಮವಾರ ವಿಶ್ವ ಸ್ತನ್ಯಪಾನ ಜಾಗೃತಿ ಸಪ್ತಾಹ ಆಚರಿಸಲಾಯಿತು.

Advertisement

ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಶ್ರೀಕಾಂತ್‌ಸಿಂಗ್ ಕಾಟೇವಾಲೆ ಮಾತನಾಡಿ, ಮಗುವಿಗೆ ತಾಯಿ ಎದೆಹಾಲು ಅಮೃತಕ್ಕೆ ಸಮಾನ. ಹೆರಿಗೆ ನಡುವೆ ನಿಯಮಿತ ಅಂತರವಿದ್ದರೆ ಮಗುವಿಗೆ ಅಗತ್ಯ ಎದೆಹಾಲು ಕೊಡಲು ಸಾಧ್ಯವಾಗುತ್ತದೆ ಎಂದರು.

ಮಕ್ಕಳ ತಜ್ಞ ಶಶಿಕಿರಣ ಹೊಸಮನಿ ಸ್ತನ್ಯಪಾನದ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು. ತಾಯಂದಿರು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಈ ವೇಳೆ ವೈದ್ಯರತ್ನ ಪ್ರಶಸ್ತಿಗೆ ಭಾಜನರಾದ ಡಾ. ಶ್ರೀಕಾಂತ್‌ಸಿಂಗ್ ಕಾಟೇವಾಲೆ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಅಧ್ಯಕ್ಷೆ ರೇಖಾ ವಡಕಣ್ಣವರ, ಉಪಾಧ್ಯಕ್ಷೆ ಮಂಜುಳಾ ಸತ್ಯಪ್ಪನವರ, ಸುಲೋಚನಾ ಜವಾಯಿ, ಮಾಲಾದೇವಿ ದಂದರಗಿ, ನಿರ್ಮಲಾ ಅರಳಿ, ಕಾವ್ಯಾ ದೇಸಾಯಿ ಮುಂತಾದವರಿದ್ದರು.


Spread the love

LEAVE A REPLY

Please enter your comment!
Please enter your name here