HomeKarnataka Newsನೀವು ಮೈಸೂರು ಅರಮನೆ ನೋಡ್ಬೇಕಾ!?, ಹಾಗಿದ್ರೆ ವಾಟ್ಸಾಪ್ ನಲ್ಲೇ ಸಿಗುತ್ತೆ ಟಿಕೆಟ್!

ನೀವು ಮೈಸೂರು ಅರಮನೆ ನೋಡ್ಬೇಕಾ!?, ಹಾಗಿದ್ರೆ ವಾಟ್ಸಾಪ್ ನಲ್ಲೇ ಸಿಗುತ್ತೆ ಟಿಕೆಟ್!

For Dai;y Updates Join Our whatsapp Group

Spread the love

ಮೈಸೂರು:- ಇಂದಿನಿಂದ ಮೈಸೂರು ಅರಮನೆ ವೀಕ್ಷಣಗೆ ವಾಟ್ಸಾಪ್​​ ಟಿಕೆಟ್ ನೀಡಲಾಗುತ್ತಿದೆ. ಮೈಸೂರು ಅರಮನೆ ನೋಡಲು ಬರುವ ಪ್ರವಾಸಿಗರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ EDCS ಮೊಬೈಲ್ ಒನ್ ಯೋಜನೆಯ ಮೂಲಕ ಟಿಕೆಟ್ ಖರೀದಿಗೆ ಅವಕಾಶ ಮಾಡಿಕೊಡಲಾಗುತ್ತಿದೆ.

ಪ್ರವಾಸಿಗರು ಸರ್ಕಾರದ ಇಡಿಸಿಎಸ್ ಮೊಬೈಲ್ ಒನ್ ಯೋಜನೆಯ ಮೂಲಕ ಮೊಬೈಲ್​ನಲ್ಲೆ ಅರಮನೆ ವೀಕ್ಷಣೆಗೆ ಟಿಕೆಟ್ ಖರೀದಿ ಮಾಡಬಹುದು. ವಾಟ್ಸಾಪ್​​ನಲ್ಲಿ 8884160088 ನಂಬರ್​ಗೆ ಎಜಿ ಎಂದು ಟೈಪ್ ಮಾಡಿ ಸಂದೇಶ ಕಳಿಸುವ ಮೂಲಕ ಟಿಕೆಟ್ ಪಡೆಯಬಹುದು. ವಾಟ್ಸಾಪ್​​ನಲ್ಲಿ ಖರೀದಿಸಿದ ಟಿಕೆಟ್ 5 ದಿನದವರೆಗೆ ಮಾನ್ಯತೆ ಇರುತ್ತದೆ. ಇದರಿಂದ ಸರತಿ ಸಾಲಿನಲ್ಲಿ ಬಂದು ಟಿಕೆಟ್ ಖರೀದಿಸುವ ಸಮಯ ಸೇವ್ ಆಗಲಿದೆ.

ಇನ್ನೂ ಅಕ್ಟೋಬರ್‌ 3 ರಂದು ದಸರಾ ಉದ್ಘಾಟನೆಯಾಗಲಿದ್ದು ಅ.12 ರಂದು ಜಂಬೂಸವಾರಿ ನಡೆಯಲಿದೆ. ಈ ಬಾರಿ ದಸರಾವನ್ನ ವಿಜೃಂಭಣೆಯಿಂದ, ಆಕರ್ಷಣೆಯಾಗಿ, ಅರ್ಥಪೂರ್ಣವಾಗಿ ಆಚರಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ಇನ್ನು ಈ ಬಾರಿ ದೀಪಾಲಂಕಾರ 21 ದಿನಗಳ ಕಾಲ ಇರಲಿದೆ‌. ಜಂಬೂಸವಾರಿ ಮುಗಿದ ಬಳಿಕವೂ 11 ದಿನ ದೀಪಾಲಂಕಾರ ಇರಲಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಆಕರ್ಷಿತವಾಗಿ ಅಲಂಕಾರ ಮಾಡಲು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!