ವಿಜಯಸಾಕ್ಷಿ ಸುದ್ದಿ, ಗದಗ : ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಜಯಂತಿಯ ಪ್ರಯುಕ್ತ ಗುರುವಾರ ಕ್ರಾಂತಿ ಸೇನಾ ಗದಗ ಜಿಲ್ಲಾ ಸಂಘಟನೆ ವತಿಯಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಗೆ ಹೂಮಾಲೆಯನ್ನು ಹಾಕಿ ಘೋಷಣೆ ಕೂಗಿ ಗೌರವ ನಮನಗಳನ್ನು ಸಲ್ಲಿಸಲಾಯಿತು.
ಕ್ರಾಂತಿ ಸೇನಾ ಜಿಲ್ಲಾ ಗೌರವ ಕಾರ್ಯದರ್ಶಿ ಪ್ರವೀಣ ಹಬೀಬ ಮಾತನಾಡಿ, ನಮ್ಮ ದೇಶಕ್ಕಾಗಿ, ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಸಮರ ಸಾರಿದ ಅಪ್ರತಿಮ ಕ್ರಾಂತಿಕಾರಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರಿಗೆ ಯುವಕರು ಗೌರವ ನಮನಗಳನ್ನು ಸಲ್ಲಿಸುವದು ಹಾಗೂ ಅವರನ್ನು ಮನದಲ್ಲಿ ಸ್ಮರಿಸುವ ಕರ್ತವ್ಯ ನಮ್ಮ ನಿಮ್ಮೆಲ್ಲರದಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕ್ರಾಂತಿ ಸೇನಾ ಕಾರ್ಯದರ್ಶಿ ಶಿವಕುಮಾರ್ ಕುಂಬಾರ್, ಕಾರ್ಯದರ್ಶಿ ಪವನ್ ಪುರದ, ಕಿರಣ್ ಪಟ್ಟಣಶೆಟ್ಟಿ, ಬಸವರಾಜ್ ಅಸುಂಡಿ, ಪ್ರದೀಪ್ ಸರ್ವದೆ, ರವಿತೇಜ ಶ್ಯಾವಿ, ರಾಮಣ್ಣ ನವಲಗುಂದ್, ಸುನಿಲ್, ಶಿವಾನಂದ್, ವಿನೋದ್, ದರ್ಶನ್, ವಿಜಯ್, ಬಸವರಾಜ್ ತಟ್ಟಿ ಮುಂತಾದವರು ಉಪಸ್ಥಿತರಿದ್ದರು.


