ದೇಶಕ್ಕಾಗಿ ಸೇವೆ ಸಲ್ಲಿಸಿದ್ದು ನನ್ನ ಸೌಭಾಗ್ಯ : ಮುತ್ತಣ್ಣ ಭಜಂತ್ರಿ

0
78th Independence Day Flag Hoisting
Spread the love

ವಿಜಯಸಾಕ್ಷಿ ಸುದ್ದಿ, ರೋಣ : ಸೈನಿಕನಾಗಿ ಭವ್ಯ ಭಾರತ ದೇಶದ ಹಿತಕ್ಕಾಗಿ ಸೇವೆ ಸಲ್ಲಿಸಿದ್ದು ನನ್ನ ಸೌಭಾಗ್ಯವಾಗಿದೆ ಎಂದು ನಿವೃತ್ತ ಸೇನಾಧಿಕಾರಿ ಮುತ್ತಣ್ಣ ಭಜಂತ್ರಿ ಹೇಳಿದರು.

Advertisement

ಅವರು ಮಾರನಬಸರಿ ಗ್ರಾಮದ ಜಲಾಮೃತ ಕೆರೆ ದಡದಲ್ಲಿ ಗ್ರಾ.ಪಂ ವತಿಯಿಂದ ಜರುಗಿದ 78ನೇ ಸ್ವಾತಂತ್ರ್ಯ ದಿನಚಾರಣೆಯ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು.

25 ವರ್ಷಗಳಿಗೂ ಹೆಚ್ಚು ಕಾಲ ನಾನು ಸೈನಿಕನಾಗಿ ಕಾರ್ಯನಿರ್ವಹಿಸಿದ್ದೇನೆ. ಈ ಸಮಯದಲ್ಲಿ ಜಮ್ಮು ಸೇರಿದಂತೆ ಅನೇಕ ಭಾಗಗಳಲ್ಲಿ ದೇಶದ ರಕ್ಷಣೆ ಕಾರ್ಯನಿರ್ವಹಿಸಿದ್ದು ಇಂದಿಗೂ ನಮಗೆ ಹೆಮ್ಮೆಯಿದೆ. ಈಗಲೂ ಸಹ ಸೇವೆಯನ್ನು ಸಲ್ಲಿಸಬೇಕು ಎಂಬ ಹಂಬಲವಿದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ದೇಶ ಸೇವೆಗೆ ತಯಾರಗಬೇಕು ಎಂದು ಕರೆ ನೀಡಿದರು.

ಗ್ರಾಮದ ಯುವಕರು ಹಾಗೂ ವಿದ್ಯಾರ್ಥಿಗಳು ದೇಶದ ಇತಿಹಾಸವನ್ನು ತಿಳಿದುಕೊಳ್ಳುವುದು ಅವಶ್ಯಕವಾಗಿದೆ. ನಮ್ಮ ಪೂರ್ವಜರ ಹೋರಾಟದ ಫಲವಾಗಿ ನಮಗೆ ಸ್ವಾತಂತ್ರ ಸಿಕ್ಕಿದೆ ಎನ್ನುವುದನ್ನು ಇಂದಿನ ಪೀಳಿಗೆ ಮರೆಯಬಾರದು. ಭಾರತ ಗಟ್ಟಿಗೊಳ್ಳಲು ನಮ್ಮಲ್ಲಿ ಏಕತೆ, ಸೌಹಾರ್ದತೆ ಅಡಕವಾಗಿರಬೇಕು. ಅಂದಾಗ ಮಾತ್ರ ದೇಶದ ಬಲವರ್ಧನೆ ಸಾಧ್ಯ ಎಂದ ಅವರು, ದೇಶ ಸೇವೆಯೇ ಈಶ ಸೇವೆ ಎನ್ನುವುದು ಸುಳ್ಳಲ್ಲ ಎಂದರು.

ನಿವೃತ್ತ ಸೈನಿಕ ಶಂಭು ಸರ್ವಿ ಹಾಗೂ ಮುತ್ತಣ್ಣ ಭಜಂತ್ರಿ ಧ್ವಜಾರೋಹಣ ನೆರವೇರಿಸಿದರು.
ಸೈನಿಕ ಬಸವರಾಜ ಮ್ಯಾಗೇರಿ, ಗ್ರಾ.ಪಂ ಅಧ್ಯಕ್ಷ ವೀರಣ್ಣ ಮರಡಿ, ಉಪಾದ್ಯಕ್ಷ ಮಂಜುಳಾ ಮಾದರ, ಶಿವಕುಮಾರ ದಿಂಡೂರ, ವೀರಪ್ಪ ನಿಡಗುಂದಿ, ಅಲ್ಲಾಸಾಬ ಮೋತೆಖಾನ್, ಮಹ್ಮದ ಸವಡಿ, ದಿಲ್‌ಶ್ಯಾದಬೇಗಂ ದೋಟಿಹಾಳ, ಹನಮವ್ವ ತಳವಾರ, ಉಮಾ ಚಿಗರಿ, ಎಸ್.ಆರ್. ಸಂಕನೂರ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here