ವಿಜಯಸಾಕ್ಷಿ ಸುದ್ದಿ, ಗದಗ : ಸಮುದಾಯದಲ್ಲಿ ವೈದ್ಯಕೀಯ ವೃತ್ತಿ ಪವಿತ್ರ ಮತ್ತು ಶ್ರೇಷ್ಠತೆಯನ್ನು ಪಡೆದಿದ್ದು, ಅವರು ನಮ್ಮ ಬದುಕಿನ ಸಂಜೀವಿನಿ ಆಗಿದ್ದಾರೆ. ಅವರು ಸೇವಾಭಾವನೆಯ ಮೂಲಕ ಸಮಾಜದ ಸೇವೆ ಮಾಡುತ್ತಿದ್ದು, ಅವರ ಸೇವೆ ಗುರುತಿಸಿ ಗೌರವಿಸುವ ಕಾರ್ಯ ಮಾಡಿರುವ ಇಂಟರ್ನ್ಯಾಶನಲ್ ಹ್ಯೂಮನ್ ರೈಟ್ಸ್ ಮತ್ತು ಪ್ರೆಸ್ ಅಸೋಸಿಯೇಶನ್ ಕಾರ್ಯ ಶ್ಲಾಘನೀಯವಾಗಿದೆ ಎಂದು ಗದಗ ಜಿಲ್ಲಾ ಕಾಂಗ್ರೆಸ್ ಯುವ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೃಷ್ಣಗೌಡ ಪಾಟೀಲ್ ಅಬಿಪ್ರಾಯಪಟ್ಟರು.
ಬೆಟಗೇರಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೊರೋನಾ ಸಮಯದಲ್ಲಿ ತಮ್ಮ ಜೀವ ಮತ್ತು ತಮ್ಮ ಪರಿವಾರದ ಬಗ್ಗೆ ಲೆಕ್ಕಿಸದೇ ಹಗಲಿರುಳು ಶ್ರಮಿಸಿರುವ ವೈದ್ಯರು ಮತ್ತು ನರ್ಸ್ಗಳ ಪವಿತ್ರ ಸೇವೆಯನ್ನು ಗುರುತಿಸಲು ಇದಕ್ಕಿಂತ ಶ್ರೇಷ್ಠ ದಿನ ಮತ್ತೊಂದಿಲ್ಲ ಎಂದರು.
ಇಂಟರ್ನ್ಯಾಶನಲ್ ಹ್ಯೂಮನ್ ರೈಟ್ಸ್ ಮತ್ತು ಪ್ರೆಸ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ನದ್ದಿಮುಲ್ಲಾ ಮಾತನಾಡಿ, ಅಸೋಸಿಯೇಶನ್ ಸಾಮಾಜಿಕ ಪ್ರಕ್ರಿಯೆಗೆ ಮೀಸಲಾಗಿದೆ. ವೈದ್ಯರ, ಸಿಬ್ಬಂದಿಗಳ ಸೇವಾಭಾವನೆ ಗುರುತಿಸಿ ಅವರನ್ನು ಸಮಾಜಕ್ಕೆ ಪರಿಚಯಿಸುವ ಕಾರ್ಯ ನಮ್ಮದಾಗಿದೆ ಎಂದು ಹೇಳಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಎಸ್.ಎಮ್. ಓಣಿ, ಡಾ. ಮೆಹರುಸಹ ಮುಲ್ಲಾ, ಡಾ. ಶ್ವೇತಾ, ಎಸ್.ಎನ್. ಲಿಂಗದಾಳ, ಜ್ವಾಯಿಸಿ ಗೌಡರ, ಸುನಂದಾ, ಶಿಶ್ವಿನಹಳ್ಳಿ, ಬಿ.ಸಿ. ಹಿರೇಹಾಳ, ಎಸ್.ಬಿ. ಗುಡ್ಡದ, ಮಂಜುನಾಥ ಬಂಡಾರಿ, ನಾಗರಾಜ ಜೋಶಿ ಸೇರಿದಂತೆ ಹಲವರಿಗೆ ವೈದ್ಯಕೀಯ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಉಸಮಾನಸಾಬ ಮಾಳೆಕೊಪ್ಪ, ರಮೇಶ, ಮಂಜುನಾಥ ನಾಗರಾಳ, ಮೆಹಬೂಬ ಕುರ್ತಕೋಟಿ, ಬಾಲರಾಜ ಅರಬರ, ಸುರೇಂದ್ರಸಿಂಗ್ ಕಾಟೇವಾಲ ಮುಂತಾದವರಿದ್ದರು.
ಅಸೋಸಿಯೇಶನ್ ಸಂಘಟಕ ಇಮಾಮಹುಸೇನ ನಮಾಜಿ ಮಾತನಾಡಿ, ಸಮುದಾಯದಲ್ಲಿ ನಿಸ್ವಾರ್ಥ ಸೇವಾಭಾವನೆಯಿಂದ ದುಡಿಯುವ ವೈದ್ಯಕೀಯ ಸಮೂಹದ ಕಾರ್ಯ ಶ್ರೇಷ್ಠ ಮತ್ತು ಅಮೂಲ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.