ಹಾವೇರಿ: ಹಿಂದೂ ಅಂದರೆ ಸತ್ಯ, ಸನಾತನ. ಬೇರೆ ಧರ್ಮಗಳು ಉತ್ಪತ್ತಿಯಾಗುವ ಮುನ್ನ ಇದ್ದಿದ್ದೇ ಹಿಂದೂಧರ್ಮ ಎಂದು ಹರಿಹರ ಪಂಚಮ ಸಾಲಪೀಠದ ವಚನಾನಂದ ಸ್ವಾಮಿ ಹೇಳಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು, ಇದು ಅಖಂಡ ಭಾರತ. ಸನಾತನ ಧರ್ಮ ಹಿಂದೂವಿನ ಭಾಗ. ಆರ್ಯರೂ ಹಿಂದೂ ಭಾಗವೇ. ಹಿಂದೂಗೆ ಗಡಿ ಇಲ್ಲ, ಹಿಂದೂ ಅಂದರೆ ಸತ್ಯ, ಸನಾತನ. ಬೇರೆ ಧರ್ಮಗಳು ಉತ್ಪತ್ತಿಯಾಗುವ ಮುನ್ನ ಇದ್ದಿದ್ದೇ ಹಿಂದೂಧರ್ಮ ಅದಲ್ಲದೆ ಮುಸ್ಲಿಂ ಸೇರಿದಂತೆ ಭಾರತದಲ್ಲಿರುವ ಪ್ರತಿಯೊಬ್ಬರು ಹಿಂದೂಗಳೇ ಎಂದರು.
ಜಗತ್ತಿನ ಸಿದ್ಧಾಂತಗಳು, ತತ್ವಗಳಿಗೆ ಮೂಲ ಹಿಂದೂ. ಶ್ರೀಲಂಕಾ, ಅಫ್ಘಾನಿಸ್ತಾನದಲ್ಲಿ ಇರುವುದು ಮೂಲತ: ಹಿಂದೂಗಳೇ. ಸಾಕ್ರೆಟಿಸ್, ತುಕಾರಾಮ್, ನಾಮದೇವ್, ಶಂಕರರು, ಬಸವಣ್ಣ ಎಲ್ಲರೂ ದಯೆಯ ಬಗ್ಗೆ ಹೇಳಿದ್ದರು. ಆಚರಣೆ ಮನೆಯಲ್ಲಿರಬೇಕು. ದೇಶ, ಸಮುದಾಯ ಅಂದಾಗ ನಾವೆಲ್ಲಾ ಹಿಂದೂಗಳು ಎಂದು ವಿವರಿಸಿದರು. ಬೇರೆ ಸ್ವಾಮೀಜಿಗಳ ಹೇಳಿಕೆ ಬಗ್ಗೆ ನಾನು ಪ್ರಸ್ತಾಪ ಮಾಡಲ್ಲ. ಹಿಂದೂ ಅಂದರೆ ಶುದ್ದ ಜೀವನ ಪದ್ದತಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ ಎಂದು ತಿಳಿಸಿದರು.