ವಿಜಯಸಾಕ್ಷಿ ಸುದ್ದಿ, ಗದಗ : ಸೇವಾ ಭಾರತಿ ಟ್ರಸ್ಟ್ ಹುಬ್ಬಳ್ಳಿ ಇದರ ರಜತ ಮಹೋತ್ಸವದ ಅಂಗವಾಗಿ ಆಗಸ್ಟ್ 15ರಂದು ಬೆಟಗೇರಿಯಲ್ಲಿ ವೃಕ್ಷಾರೋಪಣ ಕಾರ್ಯಕ್ರಮ ಜರುಗಿತು.
ಬೆಟಗೇರಿಯ ಹೆಲ್ತ್ ಕ್ಯಾಂಪ್ನ ತಾರಾಲಯದ ಒಳ ಪ್ರಾಂಗಣದಲ್ಲಿ 21 ಸಸಿಗಳನ್ನು ನೆಡಲಾಯಿತು. ಸೇವಾ ಭಾರತಿ ರಜತ ಮಹೋತ್ಸವ ಸಮಿತಿಯ ಪ್ರಮುಖರಾದ ಮಂಜುನಾಥ ಚನ್ನಪ್ಪನವರ, ಲುಕ್ಕಣಸಾ ರಾಜೂಳಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಡಾ. ಉಮೇಶ ಹಾದಿ, ಜಯರಾಜ್ ಮುಳಗುಂದ, ಅರುಣ ರಾಜಪುರೋಹಿತ, ಅಭಿಷೇಕ್, ಪ್ರಮೋದ ಭಗಿನಿಯರಾದ ನಾಗವೇಣಿ ಕಟ್ಟಿಮನಿ, ಲಲಿತಾಬಾಯಿ ಮೆಹರವಾಡೆ, ಅಶ್ವಿನಿ ಜಗತಾಪ, ವಂದನಾ ವೆರ್ಣೇಕರ್, ಲಕ್ಷ್ಮಿ ಖೋನಾ ಮುಂತಾದವರು ಪಾಲ್ಗೊಂಡಿದ್ದರು.
ಹೆಲ್ತ್ ಕ್ಯಾಂಪ್ ಭಾಗದ ರವೀಂದ್ರ ಜೋಶಿ, ರಮೇಶ ಕುಲಕರ್ಣಿ, ಶ್ರೀಧರ್ ರಂಗ್ರೇಜ್, ಸುಶೀಲ, ಅಮಿತ್, ಸಮರ್ಥ್, ಆದಿತ್ಯ, ಮೋಹನ್ ಕಬಾಡಿ, ಗಾಯತ್ರಿ ಕುಲ್ಕರ್ಣಿ, ತಾರಾಲಯದ ಆಪರೇಟರ್ ಸಿದ್ದೇಶ್ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.