ಉತ್ತರ ಕನ್ನಡ:- ಕಾಳಿ ನದಿ ಹೊಸ ಸೇತುವೆಯಡಿ ಬಿರುಕು ಬಿಟ್ಟಿರುವ ವದಂತಿ ಬಗ್ಗೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಸ್ಪಷ್ಟನೆ ಕೊಟ್ಟಿದ್ದಾರೆ.
Advertisement
IRB ಹಾಗೂ NHAI ಅಧಿಕಾರಿಗಳು ಮತ್ತು ತಜ್ಞರು ಇಂದು ಪರಿಶೀಲನೆ ನಡೆಸಿದ್ದಾರೆ.
ಹೊಸ ಸೇತುವೆಯಡಿ ಯಾವುದೇ ಬಿರುಕಿಲ್ಲ, ಅದು ಒಂದರ ಮೇಲೊಂದು ಹಾಕಿದ ಕಾಂಕ್ರೀಟ್ ಪದರವಷ್ಟೇ. NHAIಯವರು ಓವರ್ ಲ್ಯಾಪಿಂಗ್ ಆಫ್ ಕಾಂಕ್ರೀಟ್ ಸ್ಲರಿ ಎಂದು ವರದಿ ಕೊಟ್ಟಿದ್ದಾರೆ.
ಕಾಂಕ್ರೀಟ್ ಪದರ ಒಂದರ ಮೇಲೊಂದು ಹಾಕಿದ ಕಾರಣ ಬಿರುಕು ಬಿದ್ದಂತೇ ಕಾಣುತ್ತಿದೆ. ಜನರು ಯಾವುದೇ ಆತಂಕವಿಲ್ಲದೇ ಸೇತುವೆಯಲ್ಲಿ ಪ್ರಯಾಣಿಸಬಹುದು.
ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸುಳ್ಳು ಮಾಹಿತಿ ಹಬ್ಬಿಸುವವರ ಬಗ್ಗೆ ಮಾಹಿತಿ ಕಲೆ ಹಾಕಲು ಸೂಚಿಸಿದ್ದೇನೆ. ಸುಳ್ಳು ಮಾಹಿತಿ ಹಬ್ಬಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.