ಥಾಣೆ:- ಮಗನೊಬ್ಬ ತನ್ನ ತಂದೆಯ ಹೆಬ್ಬೆರಳಿನ ತುದಿಯನ್ನು ಕಚ್ಚಿ ತುಂಡು ಮಾಡಿದ ಘಟನೆ ಥಾಣೆಯ ವಾಗ್ಲೆ ಎಸ್ಟೇಟ್‌ನಲ್ಲಿ ಜರುಗಿದೆ.
Advertisement
ಆಗಸ್ಟ್ 14ರಂದು ರಾಮನಗರದಲ್ಲಿ ಈ ಘಟನೆ ನಡೆದಿದ್ದು, ಆರೋಪಿಯನ್ನು ರಂಜಿತ್ ಸರೋಜ್ ಎಂದು ಗುರುತಿಸಲಾಗಿದೆ ಎಂದು ಶ್ರೀ ನಗರ ಪೊಲೀಸ್ ಠಾಣೆಯ ಅಧಿಕಾರಿ ಮಾಹಿತಿ ನೀಡಿದ್ದಾರೆ.
ತಂದೆ ವಿಜಯಪ್ರಕಾಶ್ ಜೊತೆ ಜಗಳವಾಡಿದಾಗ, ಆ ಸಮಯದಲ್ಲಿ ಕುಡಿದ ಅಮಲಿನಲ್ಲಿದ್ದ ಆರೋಪಿ ರಂಜಿತ್ ತಂದೆಯ ಹೆಬ್ಬೆರಳಿನ ಭಾಗವನ್ನು ಕಚ್ಚಿದ್ದಾನೆ. 53 ವರ್ಷದ ಆತನ ತಂದೆ ಥಾಣೆಯ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ನಾವು ರಂಜಿತ್ ವಿರುದ್ಧ ಭಾರತೀಯ ನ್ಯಾಯದ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.