ಬೆಂಗಳೂರಿನ ಮೆಟ್ರೋ ಪ್ರಯಾಣಿಕರೇ ಕೇಂದ್ರದಿಂದ ಸಿಕ್ತು ಭರ್ಜರಿ ಗುಡ್ ನ್ಯೂಸ್!

0
Spread the love

ಬೆಂಗಳೂರು:- ಕೇಂದ್ರ ಸರ್ಕಾರವು ಬೆಂಗಳೂರು ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ ಕೊಟ್ಟಿದೆ.

Advertisement

3ನೇ ಹಂತದ ಮೆಟ್ರೋ ಯೋಜನೆಗೆ ಕೇಂದ್ರ ಸಚಿವ ಸಂಪುಟ ಗ್ರೀನ್​ಸಿಗ್ನಲ್ ನೀಡಿದೆ. ಬರೋಬ್ಬರಿ 15,611 ಕೋಟಿ ರೂ. ಕಾಮಗಾರಿ ಇದಾಗಿದ್ದು, ಕೇಂದ್ರ ಒಪ್ಪಿಗೆ ನೀಡಿದೆ.

ಇನ್ನು ಕಾರಿಡಾರ್- 2 ಹೊಸಹಳ್ಳಿ ಯಿಂದ ಕಡಬಗೆರೆಯವರೆಗೆ ಒಂಬತ್ತು ಸ್ಟೇಷನ್​ಗಳಿದ್ದು, 12.50 ಕಿಮೀ ಮಾರ್ಗ ಇದಾಗಿದೆ. ಈ ಮೂಲಕ ಒಟ್ಟು ಮೆಟ್ರೋ ವಿಸ್ತೀರ್ಣ 220.20 ಕಿ.ಮೀ ಹೊಂದಲಿದೆ.

ಕಾರಿಡಾರ್-1 ಜೆಪಿ ನಗರದ ನಾಲ್ಕನೇ ಹಂತದಿಂದ ಕೆಂಪಾಪುರದವರೆಗೆ 21 ಸ್ಟೇಷನ್​ಗಳು ಇದ್ದು, 32.15 ಕಿಮೀ ವಿಸ್ತೀರ್ಣವಿದೆ.

ಇತ್ತೀಚೆಗೆ ಬೆಂಗಳೂರಿನ ನಮ್ಮ ಮೆಟ್ರೋ ರೈಲು ನಿಲ್ದಾಣಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾದ ಹಿನ್ನಲೆಯಲ್ಲಿ, ಹೊಸ ಮಾರ್ಗಗಳ ಲೈನ್​ನಲ್ಲಿ ಪಿಎಸ್​ಡಿ ಡೋರ್ ಅಳವಡಿಸಲು ಖಾಸಗಿ ಕಂಪನಿಗೆ 152 ಕೋಟಿ ರೂಪಾಯಿ ವೆಚ್ಚದಲ್ಲಿ ಗುತ್ತಿಗೆ ನೀಡಲಾಗಿದೆ.

ಎಲ್ಲಾ ಮೆಟ್ರೋ ಸ್ಟೇಷನ್​ಗಳಿಗೂ ಪಿಎಸ್​ಡಿ ಅಳವಡಿಸಲು 700 ರಿಂದ 800 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಮೆಟ್ರೋ ಟಿಕೆಟ್ ದರ ಹೆಚ್ಚಿಸುವ ಕುರಿತು ಬಿಎಂಆರ್​ಸಿಎಲ್ ಚಿಂತನೆ ನಡೆಸಿದೆ ಎನ್ನಲಾಗಿದೆ.


Spread the love

LEAVE A REPLY

Please enter your comment!
Please enter your name here