ಟ್ರಾಫಿಕ್ ಪೊಲೀಸರೇ ನೀವು ನೋಡಲೇಬೇಕಾದ ಸ್ಟೋರಿ: ಹೆಚ್ಚುತ್ತಿದೆ ವಾಯುಮಾಲಿನ್ಯ, ಎಮಿಷನ್ ಟೆಸ್ಟ್ ಸರ್ಟಿಫಿಕೇಟ್ ತಪಾಸಣೆ ಯಾಕಿಲ್ಲ!?

0
Spread the love

ಬೆಂಗಳೂರು:- ಒಂದೆಡೆ ಬೆಂಗಳೂರಿನಲ್ಲಿ ವಾಯುಮಾಲಿನ್ಯ ಹೆಚ್ಚುತ್ತಿದೆ. ಮತ್ತೊಂದೆಡೆ ಎಮಿಷನ್ ಟೆಸ್ಟ್ ಸರ್ಟಿಫಿಕೇಟ್ ತಪಾಸಣೆ ಮಾಡಲು ಟ್ರಾಫಿಕ್ ಪೊಲೀಸರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ.

Advertisement

ನಗರದಲ್ಲಿ ಯಾವುದೇ ಬಸ್, ಲಾರಿ, ಕ್ಯಾಬ್ ಆಟೋ ಹಾಗೂ ಬೈಕ್​ಗಳಲ್ಲಿ ವಾಯುಮಾಲಿನ್ಯ ತಪಾಸಣಾ ಸರ್ಟಿಫಿಕೇಟ್​​ಗಳೇ ಇಲ್ಲ.

ಪೋಲಿಸರು, ಆರ್​​ಟಿಒ ಅಧಿಕಾರಿಗಳು ಎಮಿಷನ್ ಟೆಸ್ಟ್ ಸರ್ಟಿಫಿಕೇಟ್ ಇಲ್ಲಾಂದರೆ, ಈ ಮೊದಲು 500 ರುಪಾಯಿ ದಂಡ ವಿಧಿಸುತ್ತಿದ್ದರು. ಆದರೆ ಈಗ ಇಬ್ಬರೂ ವಾಹನಗಳನ್ನು ತಪಾಸಣೆ ಮಾಡುತ್ತಿಲ್ಲ, ದಂಡವನ್ನು ವಿಧಿಸುತ್ತಿಲ್ಲ. ಹಾಗಾಗಿ ವಾಹನಗಳ ಮಾಲೀಕರು ಎಮಿಷನ್ ಟೆಸ್ಟ್ ಮಾಡಿಸಲು ಮುಂದಾಗುತ್ತಿಲ್ಲ. ಈ ಬಗ್ಗೆ ಪರಿಸರ ತಜ್ಞ ಪ್ರಸಾದ್ ಆತಂಕ ವ್ಯಕ್ತಪಡಿಸಿದ್ದಾರೆ.

ಪೋಲಿಸರು ಮತ್ತು ಟ್ರಾಫಿಕ್ ಪೋಲಿಸರು ಎಮಿಷನ್ ಟೆಸ್ಟ್ ಸರ್ಟಿಫಿಕೇಟ್ ತಪಾಸಣೆ ಮಾಡದಿರಲು ಕಾರಣ, ಪ್ರಮಾಣ ಪತ್ರ ಇಲ್ಲ ಎಂದಾದರೆ, ಆ ನಿಯಮ ಉಲ್ಲಂಘನೆಗೆ ಸ್ಥಳದಲ್ಲಿಯೇ ದಂಡ ವಿಧಿಸುವ ಅವಕಾಶ ಈಗಿಲ್ಲ. ನ್ಯಾಯಾಲಯದಲ್ಲಿ ದಂಡ ಪಾವತಿ ಮಾಡಬೇಕು. ಇದರಿಂದ ಆರ್​ಟಿಓ ಮತ್ತು ಟ್ರಾಫಿಕ್ ಪೋಲಿಸರು ಎಮಿಷನ್ ಸರ್ಟಿಫಿಕೇಟ್ ಇಲ್ಲದ ವಾಹನಗಳಿಗೆ ತಪಾಸಣೆಯನ್ನು ಮಾಡುವುದಿಲ್ಲ ಮತ್ತು ದಂಡ ವಿಧಿಸುತ್ತಿಲ್ಲ. ಹೀಗಾಗಿ ನಗರದಲ್ಲಿ ವಿಪರೀತವಾಗಿ ವಾಯುಮಾಲಿನ್ಯ ಹೆಚ್ಚಾಗುತ್ತಿದೆ.

ಒಟ್ಟಿನಲ್ಲಿ, ಟ್ರಾಫಿಕ್ ಪೋಲಿಸರು ಮತ್ತು ಆರ್ಟಿಓ ಅಧಿಕಾರಿಗಳು ಇನ್ನಾದರೂ ಎಮಿಷನ್ ಸರ್ಟಿಫಿಕೇಟ್ ಇಲ್ಲದ ವಾಹನಗಳ ಮಾಲೀಕರಿಗೆ ದಂಡ ಹಾಕಲು ಶುರು ಮಾಡಿದರೆ ನಗರದಲ್ಲಿ ವಾಯುಮಾಲಿನ್ಯದ ಪ್ರಮಾಣ ತುಸುವಾದರೂ ಕಡಿಮೆ ಆಗಬಹುದು.


Spread the love

LEAVE A REPLY

Please enter your comment!
Please enter your name here