ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ನಾನು ಕಾಣಿಸಿಕೊಂಡರೆ RCB ಪರ ಆಡೋಕೆ ಇಷ್ಟ ಎಂದು ಎಡಗೈ ದಾಂಡಿಗ ರಿಂಕು ಸಿಂಗ್ ಹೇಳಿದ್ದಾರೆ.
ಮುಂಬರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ನ ಮೆಗಾ ಆಕ್ಷನ್ಗೆ ಈಗಾಗಲೆ ತಂಡಗಳು ಸಿದ್ಧತೆ ನೆಡೆಸುತ್ತಿವೆ. ತಾವು ಯಾವ ಆಟಗಾರರನ್ನು ರಿಟೇನ್ ಮಾಡಿಕೊಳ್ಳಬೇಕು, ಹರಾಜಿನಲ್ಲಿ ಯಾವ ಆಟಗಾರರ ಪರ ಬಿಡ್ ಮಾಡಬಹುದು ಎಂಬೆಲ್ಲ ಲೆಕ್ಕಾಚಾರದಲ್ಲಿ ಫ್ರಾಂಚೈಸ್ಗಳು ಮುಳುಗಿವೆ.
2023ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ದೊಡ್ಡ ಹೆಸರು ಮಾಡಿದ್ದ ಎಡಗೈ ಬ್ಯಾಟರ್ ರಿಂಕು ಸಿಂಗ್ ಕೆಕೆಆರ್ ತಂಡದ ಪ್ರಮುಖ ಆಟಗಾರನಾಗಿ ಬೆಳೆದಿದ್ದಾರೆ. ತಮ್ಮ ಬಿರುಸಿನ ಬ್ಯಾಟಿಂಗ್ ಪ್ರದರ್ಶನದ ಮೂಲಕ ಟೀಂ ಇಂಡಿಯಾದಲ್ಲೂ ಆಡುವ ಅವಕಾಶ ಪಡೆದ ರಿಂಕು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವ ಇಂಗಿತ ವ್ಯಕ್ತಪಡಿಸಿದ್ದಾರೆ.
ರಿಂಕು ಸಿಂಗ್ ಸ್ಪೋರ್ಟ್ಸ್ ಟುಡೇಗೆ ನೀಡಿದ ಇತ್ತೀಚಿನ ಸಂದರ್ಶನದಲ್ಲಿ KKR ತಮ್ಮನ್ನು ಉಳಿಸಿಕೊಳ್ಳದಿರಲು ನಿರ್ಧರಿಸಿಸದಿದ್ದರೆ ಯಾವ ತಂಡಕ್ಕಾಗಿ ಆಡಲು ಬಯಸುತ್ತೀರ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಆರ್ಸಿಬಿ ಪರ ಆಡಲು ಬಯಸುತ್ತೇನೆ. ಏಕೆಂದರೆ ಅಲ್ಲಿ ವಿರಾಟ್ ಕೊಹ್ಲಿ ಇದ್ದಾರೆ ಎಂದು ಹೇಳಿದ್ದಾರೆ.