ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಅಂತಿಮಘಟ್ಟ ತಲುಪಿದ್ದು, ಪೊಲೀಸರು ಇದೀಗ ನಟ ದರ್ಶನ್ ಸೇರಿ 17 ಆರೋಪಿಗಳ ಪ್ರೊಫೈಲ್ ಸಿದ್ಧಪಡಿಸಲು ಮುಂದಾಗಿದ್ದಾರೆ. ಇದರ ಬೆನ್ನಲ್ಲೇ ಗಂಡನನ್ನು ನೋಡಲು ಪರಪ್ಪನ ಅಗ್ರಹಾರದ ಜೈಲಿಗೆ ಪತ್ನಿ ವಿಜಯಲಕ್ಷ್ಮಿ ಆಗಮಿಸಿದ್ದಾರೆ. ಇದೀಗ 8ನೇ ಬಾರಿ ವಿಜಯಲಕ್ಷ್ಮಿ ಜೈಲಿಗೆ ಭೇಟಿ ಕೊಟ್ಟಿದ್ದಾರೆ.
ಪ್ರತಿ ವಾರದಂತೆ ಈ ವಾರವು ಕೂಡ ದರ್ಶನ್‌ರನ್ನು ನೋಡಲು ಬಂದಿರುವ ಅಮ್ಮನ ಜೊತೆ ಪುತ್ರ ವಿನೀಶ್ ಕೂಡ ಜೈಲಿಗೆ ಭೇಟಿ ನೀಡಿದ್ದಾರೆ. ಅಂದಹಾಗೆ, ಕಳೆದ ವಾರ ವಿಜಯಲಕ್ಷ್ಮಿ ಜೊತೆ ಶ್ರುತಿ ನಾಯ್ಡು ಭೇಟಿ ಕೊಟ್ಟಿದ್ದರು. ಬಳಿಕ ಅಭಿಷೇಕ್ ಜೊತೆ ಚಿಕ್ಕಣ್ಣ, ಧನ್ವೀರ್ ಕೂಡ ದರ್ಶನ್ ಭೇಟಿಗೆ ಜೈಲಿಗೆ ಬಂದಿದ್ದರು. ಇನ್ನೂ ಇನ್ನೂ ಜೈಲು ನಿಯಮಗಳ ಪ್ರಕಾರ, ಒಂದು ವಾರದಲ್ಲಿ 2 ಬಾರಿಯಷ್ಟೇ ಭೇಟಿಯಾಗಲು ಅವಕಾಶವಿರುತ್ತದೆ.



