ದುಷ್ಕೃತ್ಯ ಎಸಗಿರುವ ಜನಪ್ರತಿನಿಧಿಗಳನ್ನು ಅನರ್ಹಗೊಳಿಸಿ

0
Appeal from Karnataka Yuva Shakti Forum
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಗದಗ-ಬೆಟಗೇರಿ ನಗರಸಭೆ ಅಧಿಕಾರಿಗಳ ಕುಮ್ಮಕ್ಕಿನಿಂದ ನಗರಸಭೆಯ ಆಸ್ತಿ ನುಂಗಲು ಪ್ರಯತ್ನ ಮಾಡಿರುವ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ಯುವ ಶಕ್ತಿ ವೇದಿಕೆ ರಾಜ್ಯ ಉಪಾಧ್ಯಕ್ಷ ಮುತ್ತಣ್ಣ ಅನವಾಲದ ನೇತೃತ್ವದಲ್ಲಿ ನಗರದ ಗಾಂಧಿ ಸರ್ಕಲ್‌ನಲ್ಲಿ ಪ್ರತಿಭಟನೆಯ ಮೂಲಕ ಗದಗ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಮುತ್ತಣ್ಣ ಅನವಾಲದ, ನಗರಸಭೆಯ ಅಧಿಕಾರಿಗಳು ಇಂತಹ ಕೃತ್ಯದಲ್ಲಿ ಶಾಮೀಲಾಗಿ ಕೋಟಿ ಕೋಟಿ ಹಣವನ್ನು ನುಂಗಲು ಪ್ರಯತ್ನಿಸಿರುವುದು ನಾಚಿಕೆಯ ವಿಷಯ. ಇಂತಹ ದುಷ್ಕೃತ್ಯ ಎಸಗಿರುವ ಜನಪ್ರತಿನಿಧಿಗಳನ್ನು ಅನರ್ಹಗೊಳಿಸಿ ಶಾಮೀಲಾದ ಅಧಿಕಾರಿಗಳನ್ನು ಅಮಾನತ್ತು ಮಾಡಿ ತಕ್ಕ ಶಿಕ್ಷೆಯನ್ನು ಕೊಡಬೇಕೆಂದು ಒತ್ತಾಯಿಸಿದರು.

ಸಂಘಟನೆಯ ಪದಾಧಿಕಾರರಿಗಳಾದ ಮಂಜುಳಾ ಕಲಕೇರಿ, ವಿಜಯಲಕ್ಷ್ಮಿ ಅನವಾಲದ, ಸುಮಂಗಲಾ ಡಂಬಳ, ಸುಶೀಲಾ ಚಲವಾದಿ, ಜ್ಯೋತಿ ಲದ್ವಾ, ಕವಿತಾ ಸಿದ್ದಲಿಂಗ ಮಹಮ್ಮದ ಯೂಸೂಫ ಮುಲ್ಲಾ, ದಾವುದ ಉಳ್ಳಾಗಡ್ಡಿ, ಗಂಗಾ ಚಕ್ರಣ್ಣವರ, ಡಾ. ತನುಜಾ, ಗಂಗಾಧರ ಕಾಡಪ್ಪನವರ, ಶ್ರೀಕಾಂತ ಗೌಡರ, ಆನಂದ ವಾಲ್ಮೀಕಿ, ಆನಂದ ಶಾಂತಗಿರಿ, ಲಕ್ಷ್ಮಣ ಶಿರೂರ, ನಜೀರಸಾಬ ನರೇಗಲ್ಲ, ಮಕ್ಬೂಲ ಬಳ್ಳಾರಿ, ಜಹೀರ ನಮಾಜಿ, ಎಂ.ಎ. ಕೊಟ್ಟೂರ, ಅನ್ವರ ಶಿರಹಟ್ಟಿ, ಹಸೀನಾ ಅದೋನಿ, ಸರೋಜಾ ರಸಲಕರ, ಮಕ್ಬೂಲ್ ಡಂಬಳ, ಮಹೇಶ ಹೊಸಳ್ಳಿ, ಸಂತೋಷ ಅನವಾಲದ, ಸುಷ್ಮಾ ಕೊರ್ಲಹಳ್ಳಿ, ಬಾಳಮ್ಮ ಬೆನಕಳ್ಳಿ, ಯಲ್ಲಮ್ಮ ಬಳ್ಳಾರಿಗುಂಡಿ, ರೇಷ್ಮಾ ಬಳ್ಳಾರಿ ಮುಂತಾದವರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here