ವಿಜಯನಗರ: ವ್ಯಕ್ತಿಯೊಬ್ಬರು ಹಳ್ಳ ದಾಟುವಾಗಲೇ ನೋಡ ನೋಡುತ್ತಿದ್ದಂತೆ ನೀರು ರಭಸವಾಗಿ ಹರಿದು ಬಂದಿದೆ. ಬೈಕ್ ಸಮೇತ ನೀರಲ್ಲಿ ಕೊಚ್ಚಿ ಹೋಗುತ್ತಿದ್ದ ಬೈಕ್ ಸವಾರ ಕೂದಲೆಳೆ ಅಂತರದಲ್ಲಿ ಪಾರಾಗಿರುವ ಘಟನೆ ಹರಪನಹಳ್ಳಿಯ ಹೊಸಹಳ್ಳಿ ಸೇತುವೆ ಬಳಿ ನಡೆದಿದೆ.
Advertisement
ಮಲ್ಲೇಶ್(61) ಸಾವಿನ ದವಡೆಯಿಂದ ಪಾರಾದವರು. ಮೈ ಜುಮ್ ಎನ್ನಿಸುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸ್ಥಳೀಯರು ಮಲ್ಲೇಶ್‌ರ ಕೈ ಹಿಡಿದು ಎಳೆದು ಪಾರು ಮಾಡಿದ್ದಾರೆ.