ವಿಜಯಸಾಕ್ಷಿ ಸುದ್ದಿ, ಗದಗ : ಇತ್ತೀಚೆಗೆ ಕೊಲ್ಕತ್ತಾದ ಮೆಡಿಕಲ್ ಕಾಲೇಜಿನ ವೈದ್ಯ ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿ ಕೊಲೆಗೈದ ದುಷ್ಕರ್ಮಿಗಳಿಗೆ ಕಾನೂನು ರೀತಿ ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಗದಗ ಜಿಲ್ಲಾಧಿಕಾರಿಗಳ ಮುಖಾಂತರ ಕೇಂದ್ರ ಗೃಹ ಸಚಿವರಿಗೆ ಜಿಮ್ಸ್ ಹೊರಗುತ್ತಿಗೆ ನೌಕರರ ಕಾರ್ಮಿಕ ಸಂಘ ವತಿಯಿಂದ ಮನವಿ ಸಲ್ಲಿಸಿದರು.
Advertisement
ಈ ಸಂದರ್ಭದಲ್ಲಿ ಮಲ್ಲಪ್ಪ ಬಾವಿಮನಿ, ಕೃಷ್ಣ ಮಡಿವಾಳರ್, ರಾಜು ಸಾಬೋಜಿ, ರಾಘವೇಂದ್ರ ನಾಗನಾಥನಹಳ್ಳಿ, ವಿವೇಕ್ ಮಾನೆ, ಮಂಜುನಾಥ್ ರಾಮೇನಹಳ್ಳಿ,ಇಜಾಜ್ ಧಾರವಾಡ, ಭರತ್ ಸೊನ್ನೆದ, ಮೈಲಾರಿ ಹಾದಿಮನಿ, ಹುಲ್ಲಗೇಶ್ ಚೌಡಮ್ಮನವರ್, ಮಂಜುನಾಥ್ ದೊಡ್ಮನಿ, ನಾಗರಾಜ್ ಯರಗುಡಿ, ಮಮ್ತಾಜ್ ರೋಣ, ರಜಿಯಾ ಅನ್ಸಾರೆ, ಲಕ್ಷ್ಮಿ ಗೊಲ್ಲರ್, ವೇದಾ ಸುಣಗಾರ, ಚಂಪಾವತಿ ಗುಳ್ಳೆದ ಮುಂತಾದವರು ಉಪಸ್ಥಿತರಿದ್ದರು.