ವಿಜಯಸಾಕ್ಷಿ ಸುದ್ದಿ, ನರೇಗಲ್ : ವಚನಗಳ ಮೂಲವನ್ನು ಅರಿತುಕೊಂಡು ಜೀವನ ಸಾಗಿಸಬೇಕು. ನಮ್ಮ ಒಳಗಣ್ಣು ಸದಾ ಜಾಗೃತವಾಗಿರಬೇಕು. ಪ್ರಾಮಾಣಿಕ ಕಾಯಕವೇ ನಮ್ಮ ಉಸಿರಾಗಬೇಕು. ಶರಣರ ವಚನಗಳು ಬಾಳಿಗೆ ದಾರಿ ದೀಪವಾಗಿದೆ. ಅವುಗಳನ್ನು ಅಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಂಡರೆ ಯಶಸ್ಸು ಸಾಧ್ಯ ಎಂದು ಕೊಪ್ಪಳದ ಗವಿಸಿದ್ಧೇಶ್ವರ ಮಠದ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ಪಟ್ಟಣದ ಜಕ್ಕಲಿ ರಸ್ತೆಯ ಹೆಸ್ಕಾಂ ಕಚೇರಿ ಆವರಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಪಂಚ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ನಮ್ಮಲ್ಲಿನ ಕೀಳಿರಿಮೆ, ಸಣ್ಣ ವಿಚಾರಗಳನ್ನು ಕಿತ್ತು ಹಾಕಬೇಕು. ಮೌಢ್ಯಗಳು ನಮ್ಮನ್ನು ಹೈರಾಣ ಮಾಡುತ್ತಲಿವೆ. 12ನೇ ಶತಮಾನದಲ್ಲಿಯೇ ಬಸವಣ್ಣನವರು ವಚನಗಳ ಮೂಲಕ ಸಾಮಾಜಿಕ ಬದಲಾವಣೆಗೆ ನಾಂದಿ ಹಾಡಿದರು. ವಚನಗಳು ಸರ್ವ ಕಾಲಕ್ಕೂ ಪ್ರಸ್ತುತವಾಗಿವೆ. ಊರಿನಲ್ಲಿನ ಎಲ್ಲ ಜನರೂ ಸಾಮರಸ್ಯದಿಂದ ಬದುಕು ಸಾಗಿಸುವುದು ಬಹಳಷ್ಟು ಮುಖ್ಯ. ಯಾವುದೇ ಜಾತಿ, ಸಂಪತ್ತು ನಮ್ಮೊಂದಿಗೆ ಬರುವುದಿಲ್ಲ ಎಂದು ನುಡಿದರು.
ರೋಣ ಪುರಸಭೆ ಉಪಾಧ್ಯಕ್ಷ ಮಿಥುನ ಪಾಟೀಲ, ಅಕ್ಷಯ ಪಾಟೀಲ ಮಾತನಾಡಿದರು. ಹನಮಂತ ಅಬ್ಬಿಗೇರಿ, ಮೂಕಪ್ಪ ನವಲಗುಂದ, ಜಗದೀಶ ಬಂಡಿವಡ್ಡರ, ಸಂತೋಷ ಹನಮಸಾಗರ, ಶೇಖಪ್ಪ ಜುಟ್ಲ, ದಾವುದಅಲಿ ಕುದರಿ, ಮೈಲಾರಪ್ಪ ಚಳ್ಳಮರದ, ಸಂತೋಷ ಹನಮಸಾಗರ, ಖದರಬಾಷಾ ಹೂಲಗೇರಿ, ಯಲ್ಲಪ್ಪ ಅಬ್ಬಿಗೇರಿ, ಲೋಕೇಶ ಮಣ್ಣೊಡ್ಡರ, ರಾಜು ಮಣ್ಣೊಡ್ಡರ, ಶಿವಾನಂದ ಗೋಗೇರಿ, ವೀರೇಶ ಮಣ್ಣೊಡ್ಡರ, ಹೆಸ್ಕಾಂ ಸಿಬ್ಬಂದಿಗಳಿದ್ದರು.