ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಶಿರಹಟ್ಟಿಯಲ್ಲಿ ಎಐಸಿಸಿ ಮಾನವ ಹಕ್ಕುಗಳ ಸಮಿತಿ ಗದಗ ಜಿಲ್ಲೆ ಹಾಗೂ ಸಿದ್ದರಾಮಯ್ಯ ಅಭಿಮಾನಿ ಬಳಗದ ವತಿಯಿಂದ ರಾಜ್ಯದಲ್ಲಿ ಬೇರೊಬ್ಬ ರಾಜ್ಯಪಾಲರ ನೇಮಕ ಮಾಡಬೇಕೆಂದು ಆಗ್ರಹಿಸಿ ತಹಸೀಲ್ದಾರರ ಮೂಲಕ ರಾಷ್ಟçಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂತೋಷ ಕುರಿ, ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ತರಾತುರಿಯಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದು ಹಲವು ಸಂಶಯಕ್ಕೆ ಕಾರಣವಾಗಿದೆ. ಈ ಹಿಂದೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹಾಗೂ ಭಾರತೀಯ ಜನತಾಪಕ್ಷದ ಹಲವಾರು ನಾಯಕರ ಕೇಸ್ ಫೈಲ್‌ಗಳು ಹಲವಾರು ತಿಂಗಳುಗಳಿಂದ ರಾಜ್ಯಪಾಲರ ಅಂಗಳದಲ್ಲಿದ್ದು, ಇದರ ಬಗ್ಗೆ ಯಾವುದೇ ಕ್ರಮ ಕೈಕೊಳ್ಳದ ರಾಜ್ಯಪಾಲರು ತರಾತುರಿಯಲ್ಲಿ ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದರ ಹಿಂದೆ ಎನ್‌ಡಿಎ ಸರಕಾರದ ಕುತಂತ್ರವಿದ್ದಂತಿದೆ. ಈ ಕೂಡಲೇ ರಾಜ್ಯಪಾಲರನ್ನು ಹಿಂಪಡೆದು ಬೇರೊಬ್ಬ ರಾಜ್ಯಪಾಲರ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಯಲ್ಲಪ್ಪಗೌಡ ಅಣ್ಣಿಗೇರಿ, ಕರಿಯಪ್ಪ ಬಳೂಟಗಿ, ಜಗದೀಶ ಇಟ್ಟೇಕಾರ, ಸಣ್ಣಪ್ಪ ವಾಲೀಕಾರ, ಎಚ್.ಎಚ್. ಹಾಲಪ್ಪನವರ, ಸಿ.ಎಸ್. ಜೋಗೇರ ಮುಂತಾದವರು ಉಪಸ್ಥಿತರಿದ್ದರು.